ಬೆಳ್ಳಿ ರಥಕ್ಕೆ ದುಗ್ಗಲಡ್ಕದಲ್ಲಿ ಅದ್ದೂರಿ ಸ್ವಾಗತ

0

ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನ. 5 ರಂದು ಸುಳ್ಯದಿಂದ ಹೊರಟು ದುಗ್ಗಲಡ್ಕದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿತು.


ದುಗ್ಗಲಡ್ಕದಲ್ಲಿ ಬೆಳ್ಳಿರಥಕ್ಕೆ ಅದ್ದೂರಿಯ ಸ್ವಾಗತ ನೀಡಲಾಯಿತು.


ದುಗ್ಗಲಡ್ಕದ ಶ್ರೀ ದುಗ್ಗಲಾಯ ಸೇವಾ ಸಮಿತಿ,ಅಯ್ಯಪ್ಪ ಭಜನಾ ಮಂದಿರ, ಶ್ರೀಕೃಷ್ಣ ಮಂದಿರ, ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳುಕೂಟ ದುಗ್ಗಲಡ್ಕ ಇದರ ವತಿಯಿಂದ ಮತ್ತು ಸ್ಥಳೀಯ ನಾಗರಿಕರು ಭಕ್ತಿ ಪೂರ್ವಕ ಸ್ವಾಗತ ಕೋರಿದರು. ಜನರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಬೆಳ್ಳಿರಥವನ್ನು ನೋಡಿ ಕಣ್ತುಂಬಿಗೊಂಡರು.


ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ಕಜೆ ಕುಶಾಲಪ್ಪ ಗೌಡ, ದಯಾನಂದ ಸಾಲಿಯಾನ್, ಕೆ‌.ಟಿ.ವಿಶ್ವನಾಥ, ದಿನೇಶ್ ಡಿ.ಕೆ.,ನ.ಪಂ.ಅಧ್ಯಕ್ಷೆ ಶಶಿಕಲಾ ಎ., ನಾಮ ನಿರ್ದೇಶಿತ ಸದಸ್ಯ ಭಾಸ್ಕರ ಪೂಜಾರಿ, ರಮೇಶ್ ನೀರಬಿದಿರೆ, ಶೇಖರ್ ಕುದ್ಪಾಜೆ, ತೀರ್ಥರಾಮ ಕೊಯಿಕುಳಿ,

ಭವಾನಿಶಂಕರ ಕಲ್ಮಡ್ಕ,ನಾರಾಯಣ ಮಣಿಯಾಣಿ,ಧನಂಜಯ ( ಮನು),ಚಂದ್ರನ್ ಕೂಟೇಲು, ಶೀಲಾವತಿ ಮಾಧವ, ಭಾಗೀಶ್ ಕೆ.ಟಿ.ಮೊದಲಾದವರು ಉಪಸ್ಥಿತರಿದ್ದರು.