







ಜೆಸಿಐ ಸುಳ್ಯ ಸಿಟಿ ಘಟಕದ 2026 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಜೇಸಿ ನಾಗವೇಣಿ ದಾಮೋದರ ಕೋರಡ್ಕ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಜೇಸಿ ತೇಜಸ್ವಿ ಪ್ರಕಾಶ್ ನಾರ್ಕೋಡು, ಉಪಾಧ್ಯಕ್ಷರಾಗಿ ಜೇಸಿ ಪ್ರಮೀಳಾ ಮನಮೋಹನ್ ಬಳ್ಳಡ್ಕ, ಜೇಸಿ ಹಿತೇಶ್ ಕುಮಾರ್, ಜೇಸಿ ತಿರುಮಲೇಶ್ವರ , ಜೇಸಿ ನೇಮಿತ್ ರವರು ಆಯ್ಕೆಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಜೇಸಿ ವಿಷ್ಣುಪ್ರಕಾಶ್ ನಾರ್ಕೋಡು, ಘಟಕದ ಸ್ಥಾಪಕರಾದ ಜೇಸಿ ಮನಮೋಹನ್ ಬಳ್ಳಡ್ಕ, ಜೆಸಿಐ ವಲಯ 15 ರ ವಲಯಾಧಿಕಾರಿ ಜೇಸಿ ಚಂದ್ರಶೇಖರ ಕನಕಮಜಲು ಮತ್ತು ಪೂರ್ವಾಧ್ಯಕ್ಷರಾದ ಜೇಸಿ ವಿನಯ್ ರಾಜ್ ಮಡ್ತಿಲ ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.










