ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಬಹುಮತವನ್ನು ಪಡೆದು ಅಧಿಕಾರಕ್ಕೇರುತ್ತಿರುವುದು ಖುಷಿಯ ವಿಚಾರ : ಶಾಸಕಿ ಭಾಗೀರಥಿ ಮುರುಳ್ಯ

0

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎನ್.ಡಿ.ಎ ಒಕ್ಕೂಟದ ಅಲೆಗೆ ಕೊಚ್ಚಿಹೊಗಿದ್ದು, ಬಿಜೆಪಿ ನೇತೃತ್ವದ ಎನ್.ಡಿ.ಎ ಪ್ರಚಂಡ ಬಹುಮತವನ್ನು ಪಡೆದು ಅಧಿಕಾರಕ್ಕೇರುತ್ತಿರುವುದು ಖುಷಿಯ ವಿಚಾರ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ ಅವರು
ಭ್ರಷ್ಟಾಚಾರ ರಹಿತ ,ದೇಶದ ಭದ್ರತೆ, ಸಮಗ್ರ ಅಭಿವೃದ್ಧಿಗಳಿಂದ ಜನಮನ್ನಣೆ ಗಳಿಸಿರುವ ಬಿಜೆಪಿ ದೇಶದ ಮೂಲೆ ಮೂಲೆಯಲ್ಲಿ ಭದ್ರವಾಗಿ ನೆಲೆಯೂರುತ್ತಿದೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಸುಳ್ಳು ಭರವಸೆಗಳನ್ನು ಬಿಹಾರದ ಪ್ರಜ್ಞಾವಂತ ಮತದಾರರು ಸಾರಾಸಗಟಾಗಿ ತಿರಸ್ಕರಿಸಿರುವುದು ಈ ದೇಶದ ಪ್ರಧಾನಿ ಮೋದಿಯವರ ಆಡಳಿತಕ್ಕೆ ಮತ್ತೊಂದು ಮೈಲುಗಲ್ಲಾಗಿದೆ.

ಈಗಾಗಲೇ 3ರಾಜ್ಯಗಳ ಚುನಾವಣಾಯಲ್ಲಿ ಬಂದಿರುವ ಸ್ಪಷ್ಟ ಜನಾದೇಶದ ಕ್ರಾಂತಿಯು 2028ರಲ್ಲಿ ಕರ್ನಾಟಕದಲ್ಲೂ ಬಂದು ಬಿಜೆಪಿ ಆಡಳಿತ ನಡೆಸುವುದು ಗ್ಯಾರಂಟಿ, ಈಗಾಗಲೇ ಜನಸಾಮಾನ್ಯರು ಕರ್ನಾಟಕ ಕಾಂಗ್ರೆಸ್ ನ ದುರಾಡಳಿತದಿಂದ ಮತ್ತು ಅಧಿಕಾರದ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತದಿಂದ ಆಕ್ರೋಶಗೊಂಡಿರುವುದು ಸ್ಪಷ್ಟವಾಗಿದೆ.


ಬಿಹಾರ ಬಿಜೆಪಿಗೆ, ಮಿತ್ರಪಕ್ಷಕ್ಕೆ, ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರಧ್ಯಕ್ಷ ಜೆ.ಪಿ ನಡ್ಡ, ಅಮಿತ್ ಶಾ ಅವರಿಗೆ ಅಭಿನಂದನೆಗಳು ಮತ್ತು ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ ದೇವ ದುರ್ಲಬ ಕಾರ್ಯಕರ್ತ ಬಂಧುಗಳಿಗೆ ಹಾಗೂ ಮತದಾನ ಮಾಡಿದ ಬಿಹಾರದ ಸಮಸ್ತ ಜನತೆಗೆ ‍ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.