ಆಯಿಶಾ ಹಜ್ಜುಮ್ಮ ಶೀತಲ್ ಅನುಸ್ಮರಣೆ ಹಾಗೂ ತಹಲೀಲ್ ಕಾರ್ಯಕ್ರಮ
ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಸುಳ್ಯ ವತಿಯಿಂದ ಸ್ಥಳೀಯ ಮಸೀದಿಯಲ್ಲಿ ಆಯೋಜಿಸಿದ ಮಾಸಿಕ ಜಲಾಲಿಯ್ಯಾ ದ್ಸಿಕೃ ದುಆಃ ಪ್ರಾರ್ಥನಾ ಸಂಗಮ ನೂರಾರು ಜನರ ಉಪಸ್ಥಿತಿಯಲ್ಲಿ ಭಕ್ತಿ ಪೂರ್ವಕ ನಡೆಯಿತು.








ಕಾರ್ಯಕ್ರಮದಲ್ಲಿ ಸ್ಥಳೀಯ ಉಸ್ತಾದರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮುಖ್ಯ ಭಾಷಣಗೈದು ವಿಶೇಷ ಪ್ರಾರ್ಥನೆಗೈದರು.
ಮದರಸ ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ,ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಿ ಯಂ,ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ,ಪ್ರಧಾನ ಕಾರ್ಯದರ್ಶಿ ಶರೀಫ್ ಸುದ್ಧಿ ಮಾಜಿ ಅಧ್ಯಕ್ಷರಾದ ರಶೀದ್ ಜಟ್ಟಿಪಳ್ಳ, ಕೆ.ಎಂ ಮೂಸಾ,ಬಶೀರ್ ಬಾಳಮಕ್ಕಿ,ಹಾಜಿ ಮಹಮ್ಮದ್ ಎ ಎಂ,ಬಶೀರ್ ಕ್ವಾಲಿಟಿ, ಹಾಜಿ ಅಬ್ದುಲ್ ರಜಾಕ್ ಶೀತಲ್, ತಶ್ನೀಮ್ ಶೀತಲ್, ಅಬ್ದುಲ್ಲಾ ಸಿ ಎ,ಬಶೀರ್ ಗ್ಲೋಬಲ್ ಟೈಲ್ಸ್,ಹಾಜಿ ಎಸ್ ಎಂ ಮೊಯ್ದೀನ್, ಶಿಹಾಬ್ ಜೆ ಎ,ರಂಶಾದ್ ,ಮೊಯ್ದೀನ್ ಅಜ್ಮಿರಿಯಾ,ರಜಾಕ್ ಕೆ ಎಂ,ಪಾರೂಕ್ ಕೆ ಎ,ಮುಝಮಿಲ್, ಹಯಾತುಲ್ ಇಸ್ಲಾಂ ಕಮಿಟಿ ಪಧಾದಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಳ್ಯ ಶೀತಲ್ ಕಲೆಕ್ಷನ್ ಮಾಲಕ ಅಬ್ದುಲ್ ರಜಾಕ್ ತಾಯಿ ಅಯಿಶಾ ಹಜ್ಜುಮ್ಮ ಚಂದಳಿಕೆ ಇತ್ತೀಚೆಗೆ ನಿಧನರಾಗಿದ್ದು ಅವರ ಹೆಸರಿನಲ್ಲಿ ಅನುಸ್ಮರಣೆ ಹಾಗೂ ತಹಲೀಲ್ ನಡೆಯಿತು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತ ಲತೀಫ್ ಸಖಾಫಿ ಗೂನಡ್ಕ ಜಟ್ಟಿಪಳ್ಳ ಯುವಕರ ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ, ಅಸೀರ್ ,ಜಲಾಲೀಯ್ಯ ಉಸ್ತುವಾರಿ ತಾಜುದ್ದೀನ್ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು.










