ಆರ್. ಪಿ. ಕಲಾ ಸೇವಾ ಟ್ರಸ್ಟ್ ಪಾಂಬಾರು ನೇತೃತ್ವದಲ್ಲಿ ಬೆಳ್ಳಾರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜ್ಞಾನದೀಪ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ – 2025 ಈ ಸಮಾರಂಭದಲ್ಲಿ ಖ್ಯಾತ ಸಾಹಿತಿ, ಗಾಯಕ, ಸಂಘಟಕ, ಚಿತ್ರ ನಿರ್ದೇಶಕ, ನಟ ಮತ್ತು ಜ್ಯೋತಿಷಿ ಜ್ಯೋತಿಷಿ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.








ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಆರ್ ಪಿ ಸಾಹಿತ್ಯ ಬಳಗದ ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ, ಕವಿ, ಸಂಘಟಕ ರವಿ ಪಾಂಬಾರು, ಬೆಳ್ಳಾರೆ ಜೇಸಿ ಘಟಕದ ನಿಯೋಜಿತ ಅಧ್ಯಕ್ಷರಾದ ಪೂರ್ಣಿಮಾ ತೋಟಪ್ಪಾಡಿ, ಕವಿ ನಾರಾಯಣ ಕುಂಬ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.










