ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಯೋಜನೆ ಅಭಿವೃದ್ಧಿ ಇಲಾಖೆ ಸುಳ್ಯ, ಗ್ರಾಮ ಪಂಚಾಯತ್ ಕಲ್ಮಡ್ಕ, ಸ್ತ್ರೀ ಶಕ್ತಿ ಸಂಘ ಕಲ್ಮಡ್ಕ, ಬಾಲವಿಕಾಸ ಸಮಿತಿ ಕಲ್ಮಡ್ಕ ಇವುಗಳ ಜಂಟಿ ಆಶ್ರಯದಲ್ಲಿ” ಸಂಸ್ಕಾರ” ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.








ಸಭೆಯ ಅಧ್ಯಕ್ಷತೆಯನ್ನು ಕು. ಆದ್ಯ ಭಟ್ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ, ಶಿಶು ಯೋಜನೆ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಪಂಜ ವಲಯ ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ, ಸ.ಹಿ.ಪ್ರಾ ಶಾಲೆ ಕಲ್ಮಡ್ಕ ಇಲ್ಲಿನ ಎಸ್ ಡಿ ,ಎಂ ಸಿ ಅಧ್ಯಕ್ಷ ರಾಮಚಂದ್ರ ಕಾಚಿಲ, ಮುಖ್ಯ ಗುರು ಶ್ರೀಮತಿ ವಜ್ರಾಕ್ಷಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ, ಇಂಚರ ಫೌಂಡೇಶನ್ ನ ಶ್ರೀಮತಿ ಸೌಮ್ಯ,ಅಂಗನವಾಡಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೈತೇಶ್ ರಾಮತ್ತಿಕಾರ್, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸುಲೋಚನಾ ಎಡಪತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಅಂಗನವಾಡಿ ಪುಟಾಣಿಗಳು ಪ್ರಾರ್ಥನೆಗೈದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ರೈ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇಲಾಖೆಯ ಮಾಹಿತಿ ತಿಳಿಸಿದರು. ಶ್ರೀಮತಿ ಸೌಮ್ಯ ,ಇಂಚರಾ ಪೌಂಡೇಶನ್ ಮಂಗಳೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಒತ್ತಡ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಅಂಗನವಾಡಿಯ ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.
ಇದೇ ಸಂಧರ್ಭದಲ್ಲಿ ಸರಕಾರದ ಸುತ್ತೋಲೆಯಂತೆ ಅಂಗನವಾಡಿಯಲ್ಲಿ ನೂತನ ಹಳೆವಿಧ್ಯಾರ್ಥಿ ಸಂಘವನ್ನು ರಚಿಸಲಾಯಿತು.ಮಕ್ಕಳಿಗೆ ಬಹುಮಾನದ ಪ್ರಾಯೋಜಕರಾಗಿ ಸಂಸ್ಕಾರ ಅಂಗನವಾಡಿ ಕೇಂದ್ರದ
ಸೌಹಾರ್ದ, ಶ್ರೀಮಾತಾ, ಶ್ರೀದುರ್ಗಾ,ಶಿವಾಜಿ, ನಂದಿನಿ ಸ್ತ್ರೀ ಶಕ್ತಿ ಗುಂಪುಗಳು ಹಾಗೂ ಶ್ರೀಮತಿ ಮೋಹಿನಿ ಅವರುಗಳು ಸಹಕರಿಸಿದರು.ಈ ಸಂಧರ್ಭದಲ್ಲಿ ಅಂಗನವಾಡಿಗೆ ವಿವಿಧ ರೀತಿಯಲ್ಲಿ ಶ್ರಮದಾನದಲ್ಲಿ ಸಹಕರಿಸಿದ ಪೋಷಕರಿಗೆ ಧನ್ಯವಾದ ತಿಳಿಸಲಾಯಿತು. ಶ್ರೀನಿವಾಸ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಮಮತಾ ಕಾಪಡ್ಕ ವಂದಿಸಿದರು.










