ಆರೋಗ್ಯ ವಿಚಾರಿಸಿ ಬಂದ ಸಜ್ಜನ ನಾಗರಿಕರು

ಮಾನಸಿಕ ಅಸ್ವಸ್ಥತೆಯಿಂದ ತಿರುಗಾಡಿಕೊಂಡೇ ಹಲವು ವರ್ಷಗಳಿಂದ ಇದ್ದ ಅಮರಪಡ್ನೂರು ಗ್ರಾಮದ ಶೇಣಿ ಆನಂದ ಬೈರ ಕಜೆಮೂಲೆಯವರನ್ನು 2024 ನೇ ಸಾಲಿನಲ್ಲಿ ನ.13 ರಂದು ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಗೆ ಸೇರಿಸಲಾಗಿತ್ತು. ಅವರನ್ನು ಈ ವರ್ಷ ನ.13 ರಂದು ಸಜ್ಜನ ನಾಗರಿಕರು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿರುವುದಾಗಿ ತಿಳಿದು ಬಂದಿದೆ.

ಕಳೆದ ವರ್ಷ ಅಶೋಕ್ ಚೂಂತಾರು ಮತ್ತಿತರರ ಸಾರ್ವಜನಿಕರು ಸೇರಿ ಸಾರ್ವಜನಿಕರು ನೀಡಿದ ಆರ್ಥಿಕ ಸಹಾಯವನ್ನು ಪಡೆದು ಮಾನಸಿಕ ಅಸ್ವಸ್ಥತೆಯಿಂದ ತಿರುಗುತಿದ್ದ ಆನಂದ ಬೈರ ಕಜೆಮೂಲೆಯವರನ್ನು ಸೇವಾಶ್ರಮಕ್ಕೆ ಸೇರಿಸಲಾಗಿತ್ತು. ಅಲ್ಲಿಗೆ ಮತ್ತೆ ಭೇಟಿ ನೀಡಲಾಗಿ ಆರೋಗ್ಯ ವಿಚಾರಿಸಿದಾಗ ಅವರಲ್ಲಿ ಬಹಳಷ್ಟು ಬದಲಾವಣೆ ಕಂಡು ಬಂದಿದ್ದು ಚೇತರಿಕೆ ಕಂಡು ಬಂದಿರುವುದಾಗಿ ತಿಳಿದು ಬಂದಿದೆ. ತನ್ನ ಊರಿನ, ಕುಟುಂಬದ ಮಾಹಿತಿ ಎಲ್ಲವೂ ಸ್ಪಷ್ಟವಾಗಿ ಅವರಿಗೆ ನೆನಪಿದೆ ಎನ್ನಲಾಗಿದೆ.
















ಅಲ್ಲದೆ ಸ್ವಾರ್ಥವಿಲ್ಲದೆ ಇಂತಹ ಪುಣ್ಯ ಕಾರ್ಯ ನಿರ್ವಹಿಸುವ ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಯ ಡಾ. ಉದಯ ಕುಮಾರ್ ರವರ ಸೇವೆಗೆ ಕೃತಜ್ಞತೆ ಸಲ್ಲಿಸಿ ಬಂದಿದ್ದಾರೆ.










