ಸುಬ್ರಹ್ಮಣ್ಯದಲ್ಕಿ ಅಟೋ ಚಾಲಕರ ಬಹುಕಾಲದ ಬೇಡಿಕೆಯ ಅಟೋ ಸ್ಟ್ಯಾಂಡ್, ಟ್ಯಾಕ್ಸಿ ಸ್ಟ್ಯಾಂಡ್ ಇಂದು ಲೋಕಾರ್ಪಣೆಗೊಂಡಿತು.




ರಥಬೀದಿಯ ಪೊಲೀಸ್ ವೃತ್ತದ ಬಳಿ ಅಟೋ ಸ್ಟ್ಯಾಂಡ್ ಹಾಗೂ ಕೆ.ಎಸ್.ಆರ್.ಟಿ. ಸಿ. ಬಸ್ ತಂಗುದಾಣ ಬಳಿ ಆಟೋ ಸ್ಟ್ಯಾಂಡ್ ಮತ್ತು ಟ್ಯಾಕ್ಸಿ ಚಾಲಕರ ಸ್ಟ್ಯಾಂಡ್ ಉದ್ಘಾಟನೆಗೊಂಡಿತು.





ಸ್ಟ್ಯಾಂಡ್ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಆಟೋ ಚಾಲಕರು ಬೇಡಿಕೆಯನ್ನು ಇಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ವತಿಯಿಂದ ಸ್ಟ್ಯಾಂಡ್ ನಿರ್ಮಿಸಿ ಕೊಡಲಾಗಿತ್ತು. ಸ್ಟ್ಯಾಂಡ್ ಉದ್ಘಾಟನೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ನೆರವೇರಿಸಿದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಅಶೋಕ್ ನೆಕ್ರಾಜೆ, ಅಜಿತ್ ಪಾಲೇರಿ, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಪ್ರವೀಣಾ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿಯ ಲೋಲಾಕ್ಷ ಕೈಕಂಬ, ಪವನ್ ಎಂ ಡಿ., ಸತೀಶ್ ಕೂಜುಗೋಡು, ಅಚ್ಯುತ ಆಲ್ಕಬೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪಿ.ಡಬ್ಕ್ಯೂಡಿ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಬೇಡಿಕೆ ಈಡೇರಿಸಿದ್ದಕ್ಕಾಗಿ ಆಟೋ ಚಾಲಕರು ಹರೀಶ್ ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರನ್ನು ಸ್ಮರಣಿಕೆ ನೀಡಿ, ಶಾಲು ಹಾಕಿ ಗೌರವಿಸಿದರು.










