ಡಿ.15ರಿಂದ ಕರ್ಲಪ್ಪಾಡಿ ದೇವಸ್ಥಾನದ ಜಾತ್ರೆ : ಆಮಂತ್ರಣ ‌ಬಿಡುಗಡೆ

0

ಅಜ್ಜಾವರ ಗ್ರಾಮದ‌ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಜಾತ್ರೋತ್ಸವವು ಡಿ.15ರಿಂದ ಆರಂಭಗೊಳ್ಳಲಿದ್ದು, ಇದರ ಆಮಂತ್ರಣ ಬಿಡುಗಡೆಯು ನ.19ರಂದು‌ ನಡೆಯಿತು.

ಬೆಳಗ್ಗೆ ಆಮಂತ್ರಣ ವನ್ನು ದೇವರ ಮುಂದೆ ಇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಆಮಂತ್ರಣ ಬಿಡುಗಡೆಗೊಳಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸದಸ್ಯರು, ಜೀರ್ಣೋದ್ಧಾರ ಸಮಿತಿಯವರು, ಉತ್ಸವ ಸಮಿತಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಊರವರು ಈ ಸಂದರ್ಭದಲ್ಲಿ ಇದ್ದರು.