ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ

0

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಅಂಗವಾಗಿ ಕೆವಿಜಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ವಿಶೇಷ ಕಾರ್ಯಕ್ರಮ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ನ. 19ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷರಾದ ಡಾ ಕೆ.ವಿ ಚಿದಾನಂದ ವಹಿಸಿ ಮಾತನಾಡಿ ಪುರುಷರು ಸಮಾಜದ ನಿರ್ಮಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಮನೆಗೆ ಆಧಾರವಾಗಿ, ಕುಟುಂಬಕ್ಕೆ ರಕ್ಷಣೆಯಾಗಿ, ಸಮಾಜಕ್ಕೆ ಸೇವೆಯಾಗಿ, ಮತ್ತು ವೃತ್ತಿಜೀವನದಲ್ಲಿ ಹೊಣೆಗಾರಿಕೆಯ ಸಂಕೇತವಾಗಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಾಸ್ಯ ನಟ ಅರವಿಂದ್ ಬೋಳಾರ್ ಮಾತಾಮಾಡಿ ನಮ್ಮ ಸಮಾಜದ ಸಮಗ್ರ ಅಭಿವೃದ್ಧಿಗೆ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಕೈ ಜೋಡಿಸಿದಾಗ ಮಾತ್ರ ಸಮತೋಲನ ಸಾಧ್ಯ. ಪುರುಷರ ಶ್ರಮ, ಸಹಕಾರ ಮತ್ತು ಮಾನವೀಯತೆ ದಿನವೂ ಗೌರವಿಸಲ್ಪಡಬೇಕು ಎಂದರು. ಕಾಲೇಜಿನ ಡೀನ್ ಡಾ. ನೀಲಾಂಬಿಕೈ ಶುಭ ಹಾರೈಸಿದರು.

ಪುರುಷರ ದಿನಾಚರಣೆಯ ಪ್ರಯುಕ್ತ ಓ.ಬಿ.ಜಿ ವಿಭಾಗದ ಪ್ರೊ. ಡಾ ರವಿಕಾಂತ್ ಜಿ.ಒ ಪುರುಷರ ಆರೋಗ್ಯದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಎಒಎಲ್ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಡಾ. ಲೀಲಾಧರ್ ಡಿ.ವಿ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಗೌರವ ಪ್ರಾಧ್ಯಪಕರು ಶೀಲಾ ಜಿ ನಾಯಕ್, ಎಒಎಲ್ಇ ಕೌನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ, ಕೆವಿಜಿ ಕಾನೂನು ಮಹಾವಿದ್ಯಾಲಯ ಆಡಳಿತಾಧಿಕಾರಿ ಪ್ರೊ.ಕೆ.ವಿ ದಾಮೋದರ ಗೌಡ, ಕೆವಿಜಿ ಮೆಡಿಕಲ್ ಕಾಲೇಜಿನ ರಿಜಿಸ್ಟ್ರಾರ್ ಡಾ. ಸಂದೇಶ್, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ರುದ್ರ ಕುಮಾರ್ ಎಂ.ಎಂ, ಎನ್.ಎಂಪಿ.ಯು.ಸಿ ಪ್ರಾಂಶುಪಾಲರು ಮಿಥಾಲಿ ಪಿ ರೈ ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲರು ಟೀನಾ ಎಚ್.ಎಸ್, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರು ಡಾ‌. ಪ್ರಮೋದ್ ಕೆ.ಜೆ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಚಂದ್ರಾವತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ ಜಿಷ್ಣು ಅವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು. ಪವನ್ ಕೊಲ್ಚಾರ್ ಪ್ರಾರ್ಥಿಸಿದರು. ಡಾ ಲೀಲಾಧರ್ ಡಿ.ವಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ತೀರ್ಥೇಶ್ ಪಾರೆಪ್ಪಾಡಿ ವಂದಿಸಿದರು. ವಿನಯ್ ಬೆದ್ರುಪಣೆ ಮುಖ್ಯ ಅತಿಥಿ ಗಳ ಪರಿಚಯಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಚೀಫ್ ಹೆಚ್.ಆರ್ ಮ್ಯಾನೇಜರ್ ಶಿವಪ್ರಸಾದ್ ಕೆ ಹಾಗೂ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕೆವಿಜಿ ಸಮೂಹ ಸಂಸ್ಥೆಯ ಮುಖ್ಯಸ್ಥರು, ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಭೋದಕ-ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈವಿದ್ಯ ನಡೆಯಿತು.