ನ.19 ಸಂಪಾಜೆ ವಲಯ ಕಾಗ್ರೆಸ್ ವತಿಯಿಂದ ದೇಶದ ಪ್ರಥಮ ಮಹಿಳಾ ಪ್ರದಾನಿಗಳು ಸ್ವಾತಂತ್ರ್ಯ ಹೋರಾಟಗಾರರು ಮತ್ತು ವಿವಿಧ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿರುದ್ದ ಸೆಟೆದು ನಿಂತು ದೇಶವನ್ನು ಪ್ರಥವಾಗಿ ಅಣ್ವಾಯುಧ ರಾಷ್ಟ್ರವನ್ನಾಗಿಸಿ ಉಕ್ಕಿನ ಮಹಿಳೆಯೆಂದೇ ಖ್ಯಾತಿ ಪಡೆದ ದೇಶವಿಭಜಕ ಉಗ್ರವಾದಿಗಳಿಂದ ಹತ್ಯೆಗೈಲ್ಪಟ್ಟ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ 109 ನೇ ವರ್ಷದ ಹುಟ್ಟು ಹಬ್ಬವನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲನ ಕೆ.ಆರ್ ಇವರ ನೇತ್ರತ್ವದಲ್ಲಿ ದಿವಂಗತ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.









ಈ ಸಂದರ್ಭದಲ್ಲಿ ಹಿರಿಯ ನಾಯಕಿ ಮತ್ತು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಯಮುನಾ ಬಿ.ಎಸ್ , ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮತ್ತು ಮಹಿಳಾ ನಾಯಕಿಯೂ ಆದ ಶ್ರೀಮತಿ ಪ್ರಮಿಳಾ ಪೆಲ್ತಡ್ಕ , ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾದ ಶ್ರೀಮತಿ ಕಾಂತಿ.ಬಿ.ಎಸ್ , ಉಪಾಧ್ಯಕ್ಷೆ ಶ್ರೀಮತಿ ಫಿಲೋಮಿನಾ ಕ್ರಾಸ್ತ, ಸದಸ್ಯೆ ಎಪ್ಪಿವೇಗಸ್ ,ಮತ್ತು ಕೆ.ಪಿ.ಸಿ.ಸಿ.ಪ್ರಚಾರ ಸಮಿತಿಯ ಮುಖ್ಯಸಂಯೋಜಕರು,ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿಗಳಾದ ಕೆ.ಪಿ ಜಾನಿ,ಹಿರಿಯನಾಯಕರು ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಕುಂಜ್ಞಿ ಗೂನಡ್ಕ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ,ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರದಾನ ಕಾರ್ಯದರ್ಶಿ ಜ್ಞಾನಶೀಲನ್ ರಾಜು, ಸಂಪಾಜೆ ವಲಯ ಅಲ್ಪಸಂಖ್ಯಾತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎ.ಕೆ.ಹನೀಫ್ ,ಸಂಪಾಜೆ ವಯಲ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ವಸಂತ ಪೆಲ್ತಡ್ಕ ,ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ, ಖಜಾಂಜಿ ರಹೀಂ ಬೀಜದ ಕಟ್ಟೆ , ಸದಸ್ಯರಾದ ಲ್ಯಾನ್ಸಿಡಿಸೋಜ ಉಪಸ್ತಿತರಿದ್ದರು. ಲೂಕಾಸ್ ಟಿ.ಐ ಸ್ವಾಗತಿಸಿ ವಸಂತ ಪೆಲ್ತಡ್ಕ ವಂದಿಸಿದರು.










