ಚೊಕ್ಕಾಡಿ: ಪಂಚ ಸಪ್ತತಿ 2025ರ ಅಂಗವಾಗಿ ಸ್ವಚ್ಛತೆ

0

ಸುಳ್ಯ ಯುವಜನ ಸಂಯುಕ್ತ ಮಂಡಳಿ ಮತ್ತುಚೊಕ್ಕಾಡಿ ಮಯೂರಿ ಯುವತಿ ಮಂಡಲ ಇದರ ವತಿಯಿಂದ ಪಂಚ ಸಪ್ತತಿ 2025ರ ಅಂಗವಾಗಿ ” ನಮ್ಮ ಊರು ಸ್ವಚ್ಛ ಊರು” ಎಂಬ ಧ್ಯೇಯವಾಕ್ಯದೊಂದಿಗೆ ನ 21. ರಂದು ಚೊಕ್ಕಾಡಿ ಅಂಗನವಾಡಿ ಶಾಲಾ ಮಕ್ಕಳಿಗೆ ವೈಯುಕ್ತಿಕ ಸ್ವಚ್ಛತೆ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ವಲಯ ಆರೋಗ್ಯ ಅಧಿಕಾರಿಯಾದ ದಿವ್ಯ ಮಕ್ಕಳಿಗೆ ಬಾಯಿ ಹಲ್ಲು ಉಗುರು ಹಾಗೂ ಕಿವಿಯ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು ಯುವತಿ ಮಂಡಲದ ಅಧ್ಯಕ್ಷರಾದ ಹೇಮಾವತಿ ತಂಟೆಪ್ಪಾಡಿ, ಕಾರ್ಯದರ್ಶಿ ಗೀತಾ ಕೊರ್ತ್ಯಡ್ಕ ಹಾಗೂ ಯುವತಿ ಮಂಡಲದ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಉಪಸ್ಥಿತರಿದ್ದರು.