ಸ್ಥಳೀಯರಿಂದ ಆಕ್ರೋಶ, ಕೆಲಸಕ್ಕೆ ತಡೆ

ಕಳೆದ ಹಲವಾರು ವರ್ಷಗಳಿಂದ ಜಯನಗರ ರಸ್ತೆಯ ಹೊಂಡ ಗುಂಡಿಗಳಿಂದ ಬೇಸತ್ತಿರುವ ಸ್ಥಳೀಯ ನಿವಾಸಿಗಳು ರಸ್ತೆ ದುರಸ್ತಿ ಪಡಿಸಿ ಕೊಡುವಂತೆ ಆಗ್ರಹಿಸಿ ಇಲಾಖೆಗಳಿಗೆ ಮನವಿಯ ಮೇಲೆ ಮನವಿ ನೀಡುತ್ತಿದ್ದರು.
















ಕಳೆದ ಒಂದು ವಾರದ ಹಿಂದೆ ಸ್ಥಳೀಯ ಪತ್ರಕರ್ತರು ಕೂಡ ಈ ಕುರಿತು ರಸ್ತೆಯಲ್ಲಿ ಪ್ರತಿಭಟನೆ ಮಾಡಿ ಆದಷ್ಟು ಶೀಘ್ರ ರಸ್ತೆ ದುರಸ್ತಿ ಪಡಿಸಿ ಕೊಡುವ ಬಗ್ಗೆ ನಗರ ಪಂಚಾಯತ್ ಮುಖ್ಯ ಅಧಿಕಾರಿಗಳಲ್ಲಿ ಬೇಡಿಕೆಯನ್ನು ಇಟ್ಟಿದ್ದರು.
ಈ ವೇಳೆ ಸ್ಥಳಕ್ಕೆ ಬಂದಿದ್ದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಮುಂದಿನ ವಾರದೊಳಗೆ ಕೆಲಸ ಆರಂಭಿಸುವುದಾಗಿ ಭರವಸೆಯನ್ನು ನೀಡಿ ಅಲ್ಲಿಂದ ತೆರಳಿದ್ದರು.

ಇದೀಗ ನವಂಬರ್ 27ರಂದು ಪಂಚಾಯಿತಿಯಿಂದ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುತ್ತಿರುವ ಕೆಲಸವನ್ನು ಆರಂಭಿಸಿದ್ದು ಇದನ್ನು ಕಂಡ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ನಮಗೆ ಮಣ್ಣಾಕುವುದು ಬೇಡ ವೆಟ್ ಮಿಕ್ಸ್ ತಂದು ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಿ ಎಂದು ಆಗ್ರಹಿಸಿ ಕೆಲಸವನ್ನು ತಡೆದು ನಿಲ್ಲಿಸಿದ ಘಟನೆ ನಡೆದಿದೆ.










