ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಇದರ ಅಂಗವಾಗಿ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಆಶ್ರಯದಲ್ಲಿ ಜೋಗಿಯಡ್ಕ ಬಸ್ಸು ತಂಗುದಾಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.















ಸಾರ್ವಜನಿಕ ತಂಗುದಾಣವನ್ನು ಶುಚಿಗೊಳಿಸುವ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ನಾಗರಿಕರಿಗೆ ತಲುಪಿಸಲಾಯಿತು. .
ಈ ಕಾರ್ಯದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ, ಕಾರ್ಯದರ್ಶಿ ಗೀತಾ ಕೊರತ್ಯಡ್ಕ, ಪದಾಧಿಕಾರಿಗಳು ಹಾಗೂ ಸದಸ್ಯೆಯರು ಸಕ್ರಿಯವಾಗಿ ಪಾಲ್ಗೊಂಡರು.










