ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶುಚಿ 2025 ಆರೋಗ್ಯ ಮಾಹಿತಿ ಕಾರ್ಯಕ್ರಮ

0

ಪಂಚಸಪ್ತತಿ 75 ದಿನಗಳ ಸ್ವಚ್ಚತಾ ಆಂದೋಲನದಡಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶುಚಿ 2025 ಆರೋಗ್ಯ ಮಾಹಿತಿ ಕಾರ್ಯಕ್ರಮ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶಾಲಿನಿ ವಿ.ಎಲ್ ಇವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮ ಇವರು ನೆರವೇರಿಸಿದರು, ಸಭೆಯ ಅಧ್ಯಕ್ಷರಾಗಿ ಶ್ರೇಯಸ್ ಮುತ್ಲಾಜೆ ಹಾಗೂ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ, ಮುಖ್ಯೋಪಾಧ್ಯಾಯರಾ ಪೂರ್ಣಿಮಾ ಅಂಬೆಕಲ್ಲು, ಎಸ್.ಡಿ.ಎಂ.ಸಿ.ಯ ವಿಶ್ವನಾಥ ಸಾಲ್ತಾಡಿ, ಕೇಶವ ಗೌಡ ಕಾಂತಿಲ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅಚ್ಚುತ ಗುತ್ತಿಗಾರು, ವಿನ್ಯಾಸ್ ಕೊಚ್ಚಿ, ಶಿವಪ್ರಕಾಶ್ ಕಡಪಳ ಉಪಸ್ಥಿತರಿದ್ದರು. ಮಂಡಳಿಯ ಉಸ್ತುವಾರಿ ನಿರ್ದೇಶಕ ಸತೀಶ್ ಮೂಕಮಲೆ ಸ್ವಾಗತಿಸಿದರು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು ಇವರು ವಂದನಾರ್ಪಣೆ ಮಾಡಿದರು.