ಹಿರಿಯ ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಸಹಿತ ಐವರಿಗೆ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ

0

ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ 2025 ನೇ ಸಾಲಿನ ಗೌರವ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಮರ್ಕಂಜ ಗ್ರಾಮದ ರೆಂಜಾಳ ರಾಮಕೃಷ್ಣ ರಾವ್ ರವರು ಆಯ್ಕೆಯಾಗಿದ್ದಾರೆ.

ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ – 2025 ಈ ಬಾರಿ ರಾಮಕೃಷ್ಣ ರಾವ್ ರೆಂಜಾಳ ಸೇರಿದಂತೆ 5 ಮಂದಿ ಸಾಧಕರಿಗೆ ಗೌರವ ಪ್ರಶಸ್ತಿ, 10 ಜನ ಸಾಧಕರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, 3 ಪುಸ್ತಕ ಬಹುಮಾನ ಪ್ರಶಸ್ತಿ, ಓರ್ವ ಸಾಧಕರಿಗೆ ದತ್ತಿನಿಧಿ ಪ್ರಶಸ್ತಿ ಘೋಷಣೆ ಯಾಗಿದೆ.

ರಾಮಕೃಷ್ಣ ರಾವ್ ರವರು ಕೂಡ್ಲು ಮೇಳ, ಮಡಿಕೇರಿಯ ಚೌಡೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸಿರುವ ಇವರು ಕಟೀಲು ಮೇಳದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಡಿ. 21ರಂದು ಸಂಜೆ 4 ಗಂಟೆಗೆ ಉಡುಪಿಯಲ್ಲಿ ನಡೆಯಲಿದೆ.