ಸಾಮಾನ್ಯ ಕ್ಷೇತ್ರದಿಂದ ಮೂವರು ಮಹಿಳೆಯರು ಸ್ಪರ್ಧಾ ಕಣದಲ್ಲಿ
ಕೇರಳದ ಕಲ್ಲಪಳ್ಳಿಯ ಪನತ್ತಡಿ ಗ್ರಾಮ ಪಂಚಾಯತ್ ಗೆ ಇಂದು ಚುನಾವಣೆಯು ನಡೆಯಲಿದ್ದು ಬೆಳಗ್ಗೆ ಮತದಾರರು ಮತ ಚಲಾವಣೆಗಾಗಿ ಸರತಿಯ ಸಾಲಿನಲ್ಲಿ ಮತ ಗಟ್ಟೆಯಲ್ಲಿ ನಿಂತಿರುವ ದೃಶ್ಯ ಕಂಡು ಬಂತು.








ಪಂಚಾಯತ್ ವ್ಯಾಪ್ತಿಯ 17 ವಾರ್ಡಿಗೆ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಲಿದ್ದು ಕರ್ನಾಟಕ ಕೇರಳ ಗಡಿಪ್ರದೇಶ ವಾಗಿರುವ ಕಳ್ಳಪಳ್ಳಿಯ 7 ನೇ ವಾರ್ಡಿನಲ್ಲಿ ಸಾಮಾನ್ಯ ಕ್ಷೇತ್ರದಿಂದ 3 ಮಂದಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಯಿಂದ ಭವ್ಯ ಜಯರಾಜ್ ಪಾಡಿಕೊಚ್ಚಿ,
ಸಿ. ಪಿ. ಐ. ಎಂ ನಿಂದ ಪಂಚಾಯತ್ ಮಾಜಿ ಸದಸ್ಯೆಯಾಗಿದ್ದ ನಳಿನಾಕ್ಷಿ ದಾಮೋದರ ಮೂಲೆಹಿತ್ಲು ರವರು ಎರಡನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.ಕಾಂಗ್ರೆಸ್ ಪಕ್ಷದಿಂದ ಕಲ್ಲಪಳ್ಳಿಯ ಸಿಂಧೂ ಜಾರ್ಜ್ ರವರು ಸ್ಪರ್ಧಿಸುತ್ತಿದ್ದಾರೆ.
ಕಲ್ಲಪಳ್ಳಿ ಸರಕಾರಿ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ಬೆಳಗ್ಗೆ ಆರಂಭಗೊಂಡಿದೆ.










