ರಾತ್ರಿ ಕಲ್ಜಿಗದ ಕಾಳಿ ಮಂತ್ರದೇವತೆ ತುಳು ನಾಟಕ
ಉಬರಡ್ಕ ಮಿತ್ತೂರಿನ ಕುತ್ತಮೊಟ್ಟೆ (ಹೂಪಾರೆ) ಶ್ರೀ ಶಾಸ್ತಾವು ಅಯ್ಯಪ್ಪ ಭಜನಾ ಮಂದಿರದಲ್ಲಿ 34 ನೇ ವರ್ಷದ ವಾರ್ಷಿಕೋತ್ಸವ ಮತ್ತು ಪುನ: ಕಲಶಾಬಿಷೇಕ ಹಾಗೂ 14 ನೇ ವರ್ಷದ ಸಾರ್ವಜನಿಕ ದುರ್ಗಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.









ಬೆಳಿಗ್ಗೆ ದೀಪಸ್ಥಾಪನೆ, ಗಣಪತಿಹವನ, ಪುರೋಹಿತ ಯಂ. ನಟರಾಜ ಶರ್ಮರಿಂದ ಪುನ: ಕಲಶಾಭಿಷೇಕ ಕಾರ್ಯಕ್ರಮ, ನಂತರ ವಿವಿಧ ಭಜನಾತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಶ್ರೀ ಶಾಸ್ತಾವು ಅಯ್ಯಪ್ಪ ಸ್ವಾಮಿಗೆ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಸಾರ್ವಜನಿಕ ದುರ್ಗಾಪೂಜೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ನಂತರ ರಾತ್ರಿ ಗಂಟೆ 8.00 ಕ್ಕೆ ನಿತಿನ್ ಹೊಸಂಗಡಿ ನಿರ್ದೇಶನದಲ್ಲಿ ಶ್ರೀ ದುರ್ಗಾ ಕಲಾ ತಂಡ ಪುಗರ್ತೆ ಕಲಾವಿದರು ವಿಟ್ಲ ಮೈರ ಕೇಪು ಅಭಿನಯಿಸುವ ಭಕ್ತಿಪ್ರಧಾನವಾದ ಕಲ್ಜಿಗದ ಕಾಳಿ ಮಂತ್ರದೇವತೆ ಎಂಬ ತುಳು ನಾಟಕ ನಡೆಯಲಿದೆ.










