ಮೈಸೂರಿನಲ್ಲಿ ದ.ಕ. ಜಿಲ್ಲಾ ಗೌಡ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಸಂಘದ ಕಿರು ಹೊತ್ತಿಗೆ ಬಿಡುಗಡೆ

0

ಗೋಪೂಜೆ ಮತ್ತು ದೀಪಾವಳಿ ಆಚರಣೆ

ಮೈಸೂರಿನ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಸಂಘದ ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ಡಿ. 21ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ನಡೆಯಿತು.

ದ.ಕ.ಜಿಲ್ಲಾ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಯು.ಪಿ. ಶಿವಾನಂದ ಮಾತನಾಡಿ, “ಇದೊಂದು ಕುಟುಂಬ ಸಮ್ಮಿಲನ ಕಾರ್ಯಕ್ರಮದಂತಿದೆ, ಗೌರವ ಪಡೆದ ಎಲ್ಲರೂ ಸಮಾಜದಲ್ಲಿ ಎತ್ತರಕ್ಕೆ ಏರಲಿ. ಮೈಸೂರಿನಲ್ಲಿರುವ ಊರಿನ ಸಾಧಕರ ಪರಿಚಯ ಸುದ್ದಿ ಮೂಲಕ ಮಾಡಲಿದ್ದೇವೆ. ಇವತ್ತಿನ ಕಾಲಘಟ್ಟದಲ್ಲಿ ಎಲ್ಲರೂ ಡಿಜಿಟಲೈಸ್ ಆಗಬೇಕು” ಎಂದರು.

ಲೇಖಕಿ ಶ್ರೀಮತಿ ತಾರಿಣಿ ಚಿದಾನಂದರವರು ತಮ್ಮ ಬಾಲ್ಯದ ದೀಪಾವಳಿ ಆಚರಣೆ ಬಗ್ಗೆ ಮಾತನಾಡಿ, ” ಬಾಲ್ಯದಲ್ಲಿ ಅಜ್ಜಿ, ತಂದೆ, ತಾಯಿ ಜೊತೆ ಸಾವಿರಾರು ಹಣತೆಗಳನ್ನು ಉರಿಸುವ ಮೂಲಕ ನಾವು ದೀಪಾವಳಿ ಆಚರಿಸುತ್ತಿದ್ದೆವು.
ಜ್ಯೋತಿ ಬೆಳಗುವ ಹಾಗೆ ನಿಮ್ಮೆಲ್ಲರ ಜೀವನ ಬೆಳಗಲಿ” ಎಂದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಸಿಯನ್ ರೋಡ್ರಿಗಸ್ ಹಾಗೂ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಮಾಜಿ ಕಾರ್ಯದರ್ಶಿ ತೇಜಸ್ವಿ ನಾಯಕ್ ಶುಭ ಹಾರೈಸಿದರು. ಡಿ. ಬಿ. ಮುದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನಡೆಯಿತು. ಇದೇ ಸಂದರ್ಭ ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕು. ಸಂಜನಾ ಕೆ.ಎಸ್ ರವರಿಗೆ ಸನ್ಮಾನ ನಡೆಯಿತು.

ಮಾಹಿತಿ ಪುಸ್ತಕದ ಸಂಪಾದಕ ಶೀನಪ್ಪ ಗೌಡರಿಗೆ, ನಿವೃತ್ತ ಯೋಧರಾದ ರವೀಂದ್ರನಾಥ್ ರಾಮಕಜೆ, ಸಂಪತ್ ಹೊದ್ದೆಟ್ಟಿಯವರನ್ನು
ಗೌರವಿಸಲಾಯಿತು. ಚಿನ್ನಪ್ಪ ಬಿಡರಮನೆ ದೀಪಾವಳಿ ಬಗ್ಗೆ ಮಾತನಾಡಿದರು.

ಕು. ಚರಿಷ್ಮಾ ಪ್ರಾರ್ಥಿಸಿದರು.
ರಾಘವ ಕಡಪಳ ಪ್ರಾಸ್ತಾವಿಕ ಮಾತನಾಡಿದರು. ಚಿನ್ನಪ್ಪ ಕೊಲ್ಲಮೊಗ್ರ ಸ್ವಾಗತಿಸಿ, ಮೋಹನ್ ಕಾಯರ ವಂದಿಸಿದರು. ಚಿದಾನಂದ ಹೊಸಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಗೋಪೂಜೆ ಮತ್ತು ದೀಪಾವಳಿ ಸಾಂಕೇತಿಕ ಆಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಊರಿನ ಶೈಲಿಯ ಸಸ್ಯಹಾರ ಮತ್ತು ಮಾಂಸಹಾರ ಊಟೋಪಚಾರ ನಡೆಯಿತು.

ಕಾರ್ಯಕ್ರಮದ ನೇರಪ್ರಸಾರವನ್ನು ಸುದ್ದಿ ಸುಳ್ಯ ಯೂಟ್ಯೂಬ್ ಚಾನೆಲ್ ನಲ್ಲಿ ಮಾಡಲಾಗಿತ್ತು.