ಅರಂಬೂರು: ದೊಡ್ಡೇರಿ ನಾರಾಯಣ ಗುರುಸ್ವಾಮಿಯವರಿಗೆ ಗೌರವ ಸನ್ಮಾನ

0

ಅರಂಬೂರಿನ ಈಶ್ವರ ಗುರುಸ್ವಾಮಿ ಮತ್ತು ಶಿಷ್ಯ ವೃಂದದವರ ವತಿಯಿಂದ ನಿರಂತರವಾಗಿ 50 ವರ್ಷಗಳಿಂದ ಶಬರಿಮಲೆ ಯಾತ್ರೆಗೈಯುತ್ತಿರುವ ಹಿರಿಯರಾದ ದೊಡ್ಡೇರಿಯ ನಾರಾಯಣ ಗುರುಸ್ವಾಮಿ ಯವರನ್ನು ಅರಂಬೂರಿನ ಮೂಕಾಂಬಿಕಾ ಭಜನಾ ಮಂದಿರದಲ್ಲಿಜ.1ರಂದು ಗೌರವಿಸಿಸನ್ಮಾನಿಸಲಾಯಿತು.


ನಾರಾಯಣ ಗುರುಸ್ವಾಮಿ ಯವರು 1975 ರಿಂದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಯಾಗಿ ಕಟ್ಟು ನಿಟ್ಟಿನ ವೃತಾಚರಣೆ ಕೈಗೊಂಡು ನಿರಂತರವಾಗಿ ಮಕರ ಜ್ಯೋತಿ ದರ್ಶನ ಪಡೆದಿರುತ್ತಾರೆ. ಇವರು ಸುಮಾರು 2 ಸಾವಿರಕ್ಕೂ ಮಿಕ್ಕಿ ಅಯ್ಯಪ್ಪ ಭಕ್ತರಿಗೆ ಮಾಲಾಧರಣೆ ಮಾಡಿ ಶಿಷ್ಯ ವೃಂದದವರನ್ನು ಹೊಂದಿದ್ದಾರೆ.

ಅರಂಬೂರಿನಲ್ಲಿ ನಡೆಯುವ ಅಯ್ಯಪ್ಪ ದೀಪೋತ್ಸವದ ಪ್ರಧಾನ ಗುರುಸ್ವಾಮಿಯಾಗಿ 16 ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದು, ಅವರನ್ನು ಈಶ್ವರ
ಗುರುಸ್ವಾಮಿ ಮತ್ತು ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರು ಗೌರವಿಸಿದರು. ಅಯ್ಯಪ್ಪ ವೃತಧಾರಿಗಳು
ಉಪಸ್ಥಿತರಿದ್ದರು.