ಸಹಕಾರ ಭಾರತಿ ಸುಳ್ಯ ತಾಲೂಕು ವತಿಯಿಂದ ಅಭ್ಯಾಸ ವರ್ಗ

0

ಸಹಕಾರ ಭಾರತಿ ಸುಳ್ಯ ತಾಲೂಕು ವತಿಯಿಂದ ಸಹಕಾರಿ ಸಂಘಗಳ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ ಒಂದು ದಿನದ ಅಭ್ಯಾಸ ವರ್ಗ ಸುಳ್ಯ ಸಿಎ ಬ್ಯಾಂಕ್‌ನ ಎ.ಎಸ್. ವಿಜಯಕುಮಾರ್ ಸಭಾಭವನದಲ್ಲಿ ಡಿ. 3೦ ರಂದು ನಡೆಯಿತು. ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕಿ ಕು. ಭಾಗಿರಥಿ ಮುರುಳ್ಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಹಕಾರ ಭಾರತಿ ಅಧ್ಯಕ್ಷ ಸೋಮಶೇಖರ ಕಟ್ಟೆಮನೆ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಜನತಾ ಬಜಾರ್ ಅಧ್ಯಕ್ಷ ಪ್ರಸನ್ನ, ಕ್ಯಾಂಪ್ಕೊ ನಿರ್ದೇಶಕರಾದ ಎ.ವಿ. ತೀರ್ಥರಾಮ, ಶ್ರೀಮತಿ ಮಾಲಿನಿ ಪ್ರಸಾದ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಕಾರ್ಯದರ್ಶಿ ದೇವಿಪ್ರಸಾದ್, ಜಿಲ್ಲಾ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್, ಜಿಲ್ಲಾ ಕಾರ್ಯದರ್ಶಿ ಕೂಸಪ್ಪ ಗೌಡ ಮುಗುಪ್ಪು, ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ವಿಮಲಾ ಸೋಮಶೇಖರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕರುಣಾಕರ ಹಾಸ್ಪಾರೆ, ಮಹಿಳಾ ಪ್ರಮುಖ್ ಶ್ರೀಮತಿ ಭಾರತಿ ಪುರುಷೋತ್ತಮರವರಿದ್ದರು.

ಹಾಲು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಪ್ರಾರ್ಥನೆ ನೆರವೇರಿಸಿದರು. ಡಾ. ಸೋಮಶೇಖರ ಕಟ್ಟೆಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರುಣಾಕರ ಹಾಸ್ಪಾರೆ ವಂದಿಸಿದರು. ಡಾ. ಲಕ್ಷ್ಮೀಶ ಕಲ್ಲುಮುಟ್ಲು ಮತ್ತು ಶ್ರೀಮತಿ ಶರ್ಮಿಳ ಕಟ್ಟೆಮನೆ ಕಾರ್ಯಕ್ರಮ ನಿರೂಪಿಸಿದರು.