ಸುಳ್ಯ‌ ಡಿಗ್ರಿ‌ ಕಾಲೇಜು ಉಪನ್ಯಾಸಕ ಮಂಜು ಹೃದಯಾಘಾತದಿಂದ ಮೃತ್ಯು

0

ಸುಳ್ಯ ಸರಕಾರಿ ಪ್ರಥಮ‌ ದರ್ಜೆ‌ ಕಾಲೇಜು ಉಪನ್ಯಾಸಕ ಮಂಜು ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 42 ವರ್ಷ ವಯಸ್ಸಾಗಿತ್ತು.

ಮೈಸೂರಿನ ಕೆ.ಆರ್. ನಗರದ ನಿವಾಸಿಯಾಗಿರುವ ಮಂಜುರವರು ಸುಳ್ಯ ಡಿಗ್ರಿ‌ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಅಸೌಖ್ಯದಿಂದಿದ್ದ ಮಂಜುರವರು ಇಂದು ಕಾಲೇಜಿಗೆ ಬಂದಿದ್ದರು. ಮಧ್ಯಾಹ್ನ ತಾನು ಆಸ್ಪತ್ರೆಗೆ ‌ಹೋಗುವುದಾಗಿ ಕಾಲೇಜಿನಲ್ಲಿ ಹೇಳಿ, ವಿದ್ಯಾರ್ಥಿಯೊಬ್ಬನ ಬೈಕ್ ನಲ್ಲಿ ಕುಳಿತು ಸುಳ್ಯಕ್ಕೆ ಬಂದು ಅವರು ತನ್ನ ಮನೆಗೆ ಹೋದರು. ಮನೆಯಲ್ಲಿ ರೆಸ್ಟ್ ಮಾಡಿದ್ದ ಅವರು, ಮಧ್ಯಾಹ್ನ 2 ಗಂಟೆಯ ವೇಳೆಗೆ
ತನ್ನ ಬಾಡಿಗೆ ಮನೆಯಿಂದ ಮೆಡಿಕಲ್‌ಗೆ ಬರುತ್ತಿರುವಾಗ ಅವರು ರಸ್ತೆ ಬದಿ‌ ಕುಸಿದರೆಂದೂ ‌ಬಳಿಕ ಅವರನ್ನು ಸುಳ್ಯ ಆಸ್ಪತ್ರೆಗೆ ‌ಕರೆದೊಯ್ಯಲಾಯಿತು. ಆಸ್ಪತ್ರೆ ತಲುಪುವ ವೇಳೆಗೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.