













ಡ್ಯಾನ್ಸ್ & ಬೀಟ್ಸ್ (DNB) ನೃತ್ಯ ಸಂಸ್ಥೆ ಬೆಳ್ಳಾರೆ, ಇದರ ನಿರ್ದೇಶಕರಾದ ಜೀವನ್ ಟಿ.ನ್ ತಡಗಜೆ ರವರ ಮಾಲಕತ್ವದ ಸಿಂಗಾರ ಕಾಸ್ಟ್ಯೂಮ್ಸ್ ಇಂದು ಬೆಳ್ಳಾರೆ ಮೇಲಿನ ಪೇಟೆಯ ಸುಳ್ಳಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಇಂದು ( ಮಾ. 12) ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಅರ್ಚಕರಾದ ಉದಯ ಕುಮಾರ್ ಭಟ್ ಬೆಳ್ಳಾರೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಜೀವನ್ ಟಿ.ನ್ ರವರ ಪೋಷಕರಾದ ಶಾಂಭವಿ, ನಾರಯಣ ಮಡಿವಾಳ ತಡಗಜೆ, ಪತ್ನಿ ಡಾ.ಸೀಮಾಜೀವನ್ ಹಾಗೂ ಸಹೋದರ ರಂಜನ್ ಟಿ. ಎನ್ ದೇವದಾಸ ತಡಗಜೆ ಉಪಸ್ಥಿತರಿದ್ದರು.
ಅಜಪಿಲ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ಕಟ್ಟಡದ ಮಾಲಕಾರಾದ ಡಾ.ಕೇಶವ ಸುಳ್ಳಿ, ಎ.ಕೆ ಮಣಿಯಾಣಿ ಬೆಳ್ಳಾರೆ, ಗಂಗಾಧರ ರೈ ಪುಡ್ಕಜೆ, ಮಹಾಲಿಂಗ ನಾಯ್ಕ್ ಪಾಲ್ತಾಡ್, ಒವಿನ್ ಪಿಂಟೋ ಬೆಳ್ಳಾರೆ, ಗೋಪಾಲಕೃಷ್ಣ ರೈ ಉಮಿಕ್ಕಳ ಮತ್ತು ಮನೆಯವರು, ಜಯರಾಮ ಉಮಿಕ್ಕಳ ಮತ್ತು ಮನೆಯವರು, ಪ್ರದೀಪ್ ಕುಮಾರ್ ರೈ ಪನ್ನೆ, ಬ್ರಿಜೇಶ್ ಕುಮಾರ್ ರೈ ಬೆಳ್ಳಾರೆ ಮತ್ತು ಸುದ್ದಿ ಸಂಸ್ಥೆಯ ರಮ್ಯ ಸತೀಶ್ ಕಳಂಜ, ಉದ್ಯಮಿಗಳಾದ ಚಂದ್ರಶೇಖರ ರೈ ಬಜನಿ, ಪ್ರಸಾದ್ ಸೇವಿತ, ಪ್ರದೀಪ್ ರೈ ಅಜರಂಗಳ, ಕೀರ್ತನ್ ಬಾಯಂಬಾಡಿ, ಪ್ರದೀಪ್ ಕುಮಾರ್ ರೈ ಬೀಡು, ರಜಿತ್ ಭಟ್ ಪಂಜ ಬೀಡು, ಮತ್ತು ಹಲವಾರು ಪೋಷಕ ಮಿತ್ರರು, ಬಂಧುಗಳು ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಡ್ಯಾನ್ಸ್ & ಬೀಟ್ಸ್ ನ ಪೋಷಕರಾದ ಸುಜಿತ್ ರೈ ಎಣ್ಮೂರು ಪಟ್ಟೆ, ಶ್ರೀರಂಜಿನಿ ಪಂಜದ ಬೀಡು, ಸಂಸ್ಥೆಯ ಸಹಕಲಾವಿದರಾದ ಸತೀಶ್ ಕಳಂಜ, ಹರೀಶ್ ರೈ ಕೊಡಿಯಾಲ, ಕೀರ್ತನ್ ಕಳಂಜ, ಗಣೇಶ್ ಮಠತಡ್ಕ, ರವೀಂದ್ರ ಮುಕ್ಕೂರು ಸಹಕರಿಸಿದರು.
ಸಂಸ್ಥೆಯ ಮಾಲಕರಾದ ಜೀವನ್ ಬೆಳ್ಳಾರೆಯವರು ಈ ನೂತನ ಸಂಸ್ಥೆಯಲ್ಲಿ ವಿವಿಧ ನೃತ್ಯ ಪ್ರಕಾರಗಳ ವೇಷಭೂಷಣಗಳು, ಆಭರಣಗಳು ಮತ್ತು ಪರಿಕರಗಳು ಬಾಡಿಗೆಗೆ ದೊರೆಯುತ್ತದೆ ಎಂದು ತಿಳಿಸಿ ಸರ್ವರ ಸಹಕಾರವನ್ನು ಕೋರಿದರು.







