













ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ.ಬಸ್ಟೇಂಡ್ ಎದುರು ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ರೈ ಅಜ್ರಂಗಳರವರ ಮಾಲಕತ್ವದ ಪ್ರಣವ ಟೆಕ್ಸ್ ಟೈಲ್ಸ್ ನ ಸಹಸಂಸ್ಥೆ ಮದುವೆಯ ವಿನೂತನ ಸಂಗ್ರಹದೊಂದಿಗೆ ಪ್ರಣವ ವೆಡ್ಡಿಂಗ್ ಸೆಂಟರ್ ನೂತನ ಶೋರೂಂನ ಬೆಳ್ಳಾರೆಯ ವಿಪ್ರಭಾ ಕಾಂಪೆಕ್ಸ್ ನಲ್ಲಿ ಮಾ.16 ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಕುಂಬೋಳ್ ತಂಞಳ್ ಬಹು| ಸೈಯ್ಯದ್ ಕೆ.ಎಸ್. ಅಲಿ, ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರು ರೆ.ಫಾ.ಡಾ.ಆ್ಯಂಟನಿ ಪ್ರಕಾಶ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿರುವರು.







