ಅಡ್ಕಾರು: ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನ

0

ಪ್ರತಿಷ್ಠಾ ದಿನ ಮತ್ತು ವರ್ಷಾವಧಿ ತಂಬಿಲದ ಪ್ರಯುಕ್ತ ಗೊನೆಮುಹೂರ್ತ


ಜಾಲ್ಸೂರು ಗ್ರಾಮದ ಅಡ್ಕಾರು ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದಲ್ಲಿ ಮಾ.೨೨ರಂದು ನಡೆಯಲಿರುವ ಶ್ರೀ ಗುಳಿಗ ದೈವಕ್ಕೆ ತಂಬಿಲ ಸೇವೆ ಹಾಗೂ ಶ್ರೀ ವಿಷ್ಣುಮೂರ್ತಿ ದೈವಕ್ಕೆ ವರ್ಷಾವಧಿ ತಂಬಿಲ ಸೇವೆ ಕಾರ್ಯಕ್ರಮದ ಪ್ರಯುಕ್ತ ಗೊನೆಮುಹೂರ್ತ ಮಾ.೧೫ರಂದು ನಡೆಯಿತು.

ಬೆಳಗ್ಗೆ ಗಣಪತಿ ಹವನ ನಡೆದು ನಂತರ ಉಮಾನಾಥ ಗೌಡ ಪಟೇಲ್ ಮನೆ ಅರಿಯಡ್ಕ ರವರ ತೋಟದಲ್ಲಿ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಮಾನಾಥ ಪಟೇಲ್ ಮನೆ ಅರಿಯಡ್ಕ, ಪೀತಾಂಬರ ಎರ್ಮೆಕ್ಕಾರ್, ನವೀನ ಅಂಬಾಡಿಮೂಲೆ, ರವೀಂದ್ರ ಕಜೆಗz, ನಾರಾಯಣ ಸುಳ್ಯ, ಪ್ರಜ್ವಲ್ ಅಂಬಾಡಿಮೂಲೆ, ಗಂಗಾಧರ ವಿನೋಬನಗರ, ಹರ್ಷಿತ್, ಜಸ್ವಿನ್ ಹಾಗೂ ಅಂಬಾಡಿಮೂಲೆ ಕುಟುಂಬಸ್ಥರು ಉಪಸ್ಥಿತರಿದ್ದರು.