ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ ಮುಂದೂಡಿಕೆ

0

ಆಲೆಟ್ಟಿ ಗ್ರಾಮದ ಗಬ್ಬಲ್ಕಜೆ ತರವಾಡಿನ ಅಧೀನದಲ್ಲಿರುವ ಏಣಾವರ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವವು ಮಾ. 25 ರಂದು ನಡೆಯಬೇಕಾಗಿದ್ದು ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಮಾ. 24 ರಂದು ಪೂರ್ವಾಹ್ನ ಉಗ್ರಾಣ ತುಂಬಿಸಿ ಅದೇ ದಿನ ರಾತ್ರಿ ಸಾನಿಧ್ಯದಲ್ಲಿ ಕುತ್ತಿ ಪೂಜೆಯುನಡೆಯಬೇಕಾಗಿದ್ದು ಮಾ. 25 ರಂದು
ಶ್ರೀ ದೈವಗಳ ಪ್ರತಿಷ್ಠೆ ನಡೆಯಬೇಕಾಗಿದ್ದು ಈಗಾಗಲೇ ಜೀರ್ಣೋದ್ದಾರ ಕೆಲಸ ಕಾರ್ಯಗಳು ನಡೆಯುತ್ತಿದ್ದು,ಇದೀಗ ಅನಿವಾರ್ಯಕಾರಣಾಂತರಗಳಿಂದ ಮಹೋತ್ಸವವು ಮುಂದೂಡಲ್ಪಟ್ಟಿದ್ದು ಮುಂದಿನ ದಿನ ನಿಗದಿಪಡಿಸಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.