ನಿಡ್ವಾಳ ಶ್ರೀ ಮಹಾವಿಷ್ಣು ದೇವರ ಭಕ್ತಿಗೀತೆ ಬಿಡುಗಡೆ

0

ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ. 24 ರಿಂದ ಮೇ. 3 ರ ತನಕ ವಿಜೃಂಭಣೆಯಿಂದ ನಡೆಯಲಿದೆ.

ಮಾ. 27 ರಂದು ಮಲ್ಲಿಕಾ ಮಟ್ಟಿ ಗಾಯನದ “ಪಾಲನಾ ಕರ್ತೃ”‘ ಎಂಬ ನಿಡ್ವಾಳ ಶ್ರೀ ಮಹಾವಿಷ್ಣು ದೇವರ ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಶಾಂತಿಮೊಗೆರು ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಕೆಡೆಂಜಿ ದೀಪ ಬೆಳಗಿಸಿದರು.

ನಿಡ್ವಾಳ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಪುನರ್ ನಿರ್ಮಾಣ ಸಮಿತಿ ಕೋಶಾಧಿಕಾರಿ ಚಂದ್ರಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಆರ್ಚಕ ಅಕ್ಷಯ್ ಭಟ್ ಬರ್ಲಾಯಬೆಟ್ಟು,ಭಕ್ತಿ ಗೀತೆಯ ಸಾಹಿತಿ,ರಾಗ ಸಂಯೋಜಕ ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ, ನಿರ್ಮಾಪಕಿ ಶ್ರೀಮತಿ ಹಂಸಾವತಿ ಚಂದ್ರಪ್ರಕಾಶ್ ಕಂಬಳ, ಛಾಯಾ ಗ್ರಾಹಕರಾದ ಚೇತನ್ ಚಳ್ಳಕೋಡಿ, ಸಂತೋಷ್ ಬಳ್ಪ ಉಪಸ್ಥಿತರಿದ್ದರು. ಇದೇ ವೇಳೆ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.ವಿವಿಧ ಸಮಿತಿಗಳ ಪದಾಧಿಕಾರಿಗಳು, ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಪ್ರಕಾಶ್ ಕಂಬಳ ಸ್ವಾಗತಿಸಿದರು. ಗುರುಪ್ರಸಾದ್ ತೋಟ ವಂದಿಸಿದರು.