ಪಾಲಡ್ಕದಲ್ಲಿ ಪಿಕಪ್ ಮತ್ತು ಕಾರು ನಡುವೆ ಅಪಘಾತ

0

ಪಿಕಪ್ ಚಾಲಕ ಸೇರಿದಂತೆ ನಾಲ್ಕು ಮಂದಿ ಕಾರ್ಮಿಕರಿಗೆ ಗಾಯ,ಆಸ್ಪತ್ರೆಗೆ ದಾಖಲು

ಪಾಲಡ್ಕಬಳಿ ಪಿಕಪ್ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಪಿಕಪ್ ವಾಹನ ಚಾಲಕ ಮತ್ತು ನಾಲ್ಕು ಮಂದಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಏಪ್ರಿಲ್ 15ರಂದು ನಡೆದಿದೆ.

ಮಡಿಕೇರಿಯಿಂದ ಕಾಸರಗೋಡು ಕಡೆ ಹೋಗುತ್ತಿದ್ದ ಕಾರು ಮತ್ತು ಸುಳ್ಯದಿಂದ ಅರಂತೋಡಿಗೆ ಬರುತ್ತಿದ್ದ ಪಿಕಪ್ ನ ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪಿಕಪ್ ವಾಹನ ಪಲ್ಟಿ ಯಾಗಿದ್ದು ಕಾರು ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಕಾರು ಮತ್ತು ಪಿಕಪ್ ವಾಹನ ಜಖಂನ್ಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಸುಳ್ಯದ ಶಿವ ಆಂಬುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆಗೆ ಸಾಗಿಸಲಾಗಿದೆ.