ಎ.೨೩ರಿಂದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

0

ಗೊನೆ ಮುಹೂರ್ತ

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎ.೨೩ರಿಂದ ಆರಂಭಗೊಂಡು ಎ.೨೭ರವರೆಗೆ ನಡೆಯಲಿದೆ.
ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಎ.೧೫ರಂದು ನಡೆಯಿತು.
ಎ.೨೩ರಂದು ಬೆಳಗ್ಗೆ ಉಗ್ರಾಣ ತುಂಬಿಸುವುದು. ರಾತ್ರಿ ದುರ್ಗಾಪೂಜೆ, ರಂಗಪೂಜೆ ನಡೆಯುವುದು. ಎ.೨೪ರಂದು ಪೂರ್ವಾಹ್ನ ಭಜನೆ, ಗಣಪತಿ ಹವನ, ಹರಕೆಯ ತುಲಾಭಾರ, ಮಹಾಪೂಜೆ ನಂತರ ಸಮಾರಾಧನೆ ನಡೆಯುವುದು. ಅಪರಾಹ್ನ ೩ ಕ್ಕೆ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರಲಾಗುವುದು. ರಾತ್ರಿ ಭೂತಬಲಿ ಉತ್ಸವ, ಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ ನೃತ್ಯ ಬಲಿ ಉತ್ಸವ ನಡೆಯುವುದು. ಎ.೨೫ರಂದು ಬೆಳಗ್ಗೆ ದೇವರ ದರ್ಶನ ಬಲಿ ಉತ್ಸವ, ಬಳಿಕ ರಾಜಾಂಗಣ ಪ್ರಸಾದ ವಿತರಣೆ (ಬಟ್ಟಲು ಕಾಣಿಕೆ), ಮಂತ್ರಾಕ್ಷತೆ ನಡೆಯುವುದು. ಸಂಜೆ ಭಜನಾ ಕಾರ್ಯಕ್ರಮ ಜರುಗುವುದು. ಎ.೨೬ರಂದು ಬೆಳಗ್ಗೆ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದು. ೮.೩೦ ಗಂಟೆಗೆ ಶ್ರೀ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ನಂತರ ಸಿರಿಮುಡಿ ಪ್ರಸಾದ ವಿತರಣೆ ನಡೆಯುವುದು. ಬಳಿಕ ಶ್ರೀ ಧೂಮಾವತಿ ಮತ್ತು ರುದ್ರಚಾಮುಂಡಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ. ಸಂಜೆ ಶ್ರೀ ಉಳ್ಳಾಕುಲು ಭಂಡಾರ ಕಳೇರಿಗೆ ಹಿಂತಿರುಗುವುದು. ೬.೩೦ಕ್ಕೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಕಣೆಮರಡ್ಕದಿಂದ ದೈವದ ಭಂಡಾರ ತರುವುದು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್. ಎ.೨೭ರಂದು ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ. ಬಳಿಕ ಪ್ರಸಾದ ವಿತರಣೆ. ಅಪರಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಕಣೆಮರಡ್ಕಕ್ಕೆ ಹಿಂತಿರುಗುವುದು.