ತೊಡಿಕಾನ ಜಾತ್ರೆ: ವಿಜೃಂಭಣೆಯಿಂದ ನಡೆದ ದೊಡ್ಡದರ್ಶನ ಬಲಿ, ಬಟ್ಟಲು ಕಾಣಿಕೆ

0

ಆಕರ್ಷಣೆಯಾದ ಕೆಮ್ಮಿಂಜೆಯ ಬಸವ ಹಾಗೂ ಬೇತಾಳ ಕುಣಿತ…!

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಇಂದು ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ವಿಜೃಂಭಣೆಯಿ೦ದ ನಡೆಯಿತು.

ಬಲಿ ಪ್ರಾರಂಭದಿಂದ ಹಿಡಿದು ಕೊನೆಯವರೆಗೆ ಕೆಮ್ಮಿಂಜೆ ದೇವಾಲಯದ ಬಸವ ಮತ್ತು ಪಂಜ ಬೇತಾಳ ಕುಣಿತ ಎಲ್ಲರ ಮನಸೊರೆಗೊಳಿಸಿತು.

ಸೀಮೆಯ ಹಾಗೂ ಪರವೂರ ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಆರ್ಥಿಕ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು, ಹಸಿರುವಾಣಿ ಸಂಚಾಲಕ ಕೇಶವ ಅಡ್ತಲೆ, ಮ್ಯಾನೇಜರ್ ಆನಂದ ಕಲ್ಲುಗದ್ದೆ, ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ತಮಲೆ, ವ್ಯವಸ್ಥಾಪನ ಸಮಿತಿ ಸದಸ್ಯರು, ಪಂಜ ಸೀಮೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಸೇರಿದಂತೆ ಪ್ರಮುಖರು ಹಾಜರಿದ್ದರು.

ಎ.೧೯ (ನಾಳೆ) ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು, ಉತ್ಸವ ಬಲಿ, ಅವಭೃತ ಸ್ನಾನವಾಗಿ ಬಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ ಮತ್ತು ಎ.೨೦ ರಂದು ಸೋಮವಾರ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.