ತೃಪ್ತಿ ಸ್ತ್ರೀ ಶಕ್ತಿ ಗೊಂಚಲಿನ ಮಾಸಿಕ ಸಭೆ ಮತ್ತು ಮಹಿಳಾ ದಿನಾಚರಣೆ

0

ಆಲೆಟ್ಟಿ ಗ್ರಾಮದ ತೃಪ್ತಿ ಸ್ತ್ರೀ ಶಕ್ತಿ ಗೊಂಚಲಿನ ಮಾಸಿಕ ಸಭೆ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗಷ್ಟೆ ಆಲೆಟ್ಟಿ ಸಿಎ ಬ್ಯಾಂಕಿನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಾಮಾಜಿಕವಾಗಿ ದುಡಿದಂತ ಸುಳ್ಯ ತಾಲೂಕು ಶಿಶುಕಲ್ಯಾಣಭಿವೃದ್ಧಿ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ , ಮತ್ತು ಆಲೆಟ್ಟಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್‌, ಜಯಲತರನ್ನು ಸನ್ಮಾನಿಸಿದರು.

ಪಿಡಿಒ ಅವರು ಮಾತನಾಡಿ ಎನ್‌.ಆರ್‌.ಎಲ್‌.ಎಂ ನ ಬಗ್ಗೆ ಮಾಹಿತಿಯನ್ನು ನೀಡಿದರು. ದೀಪಿಕಾರವರು ಮಾತಾಡಿ ಸಂಘದ ಸದಸ್ಯರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸರಕಾರದಿಂದ ಬರುವ ಅನುದಾನದ ಬಗ್ಗೆ ವಿವರಿಸಿದರು.

ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಇಟ್ಟುಕೊಂಡು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜೀವಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಅಂಗನವಾಡಿ ಕಾರ್ಯಕರ್ತೆ ರಾಧಾ ಸ್ವಾಗತಿಸಿ, ನಿರೂಪಿಸಿದರು.