ಆಡಳಿತಮಂಡಳಿ, ಜೀರ್ಣೋದ್ಧಾರ ಸಮಿತಿಯಿಂದ ಪೂರ್ವ ಸಿದ್ದತಾ ಸಭೆ














ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ಅಂತಿಮ ಹಂತದಲ್ಲಿದ್ದು ಜೂನ್ ತಿಂಗಳಲ್ಲಿ ಶ್ರೀ ದೈವಗಳ ಪುನ:ಪ್ರತಿಷ್ಠಾ ಕಲಶೋತ್ಸವಕ್ಕೆ ದಿನ ನಿಗದಿ ಪಡಿಸಲಾಗಿದ್ದು, ಆಡಳಿತ ಸಮಿತಿಮತ್ತುಜೀರ್ಣೋದ್ಧಾರ ಸಮಿತಿಯ ವತಿಯಿಂದ ಪೂರ್ವ ಸಿದ್ಧತಾ ಸಭೆಯು ಮೇ.16 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.

ದೈವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಪಿ.ಕೆ.ಉಮೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ತಂತ್ರಿಗಳ ನಿರ್ದೇಶನದಂತೆ ಜೂನ್ 15 ರಿಂದ 18 ರ ತನಕ ಪುನಃ ಪ್ರತಿಷ್ಠಾ ಕಾರ್ಯಕ್ಕೆ ದಿನ ನಿಗದಿಪಡಿಸಲಾಗಿದ್ದು, ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ವಿವರ ನೀಡಿದರು.
ದೈವಸ್ಥಾನದಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು ಅಧ್ಯಕ್ಷತೆ ವಹಿಸಿದ್ದರು.
ಆಮಂತ್ರಣ ಪತ್ರ ಮುದ್ರಣ ಹಾಗೂ ವೈದಿಕ ಕಾರ್ಯಕ್ರಮಗಳ ರೂಪು ರೇಷೆಗಳ ಬಗ್ಗೆ ವಿಚಾರ ವಿಮರ್ಶೆ ಮಾಡಲಾಯಿತು.
ಕಲಶೋತ್ಸವದ ಯಶಸ್ವಿಗೆ ಉಪ ಸಮಿತಿಗಳನ್ನು ರಚಿಸುವುದಾಗಿ ತೀರ್ಮಾನಿಸಲಾಯಿತು. ಮುಂದಿನ ವಾರದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಮಾಡಿ ವಾರ್ಡುವಾರು ಮನೆ ಮನೆಗೆ ಹಂಚುವ ಬಗ್ಗೆ ಜವಬ್ದಾರಿ ಹಂಚಿಕೆ ಮಾಡುವುದಾಗಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು, ಕೋಶಾಧಿಕಾರಿ ಅವಿನಾಶ್ ಕುರುಂಜಿ, ದಿನೇಶ್ ಕುಮಾರ್ ಕೆ.ಸಿ, ಡಿ.ಎಸ್ ಗಿರೀಶ್ ದೇಂಗೋಡಿ, ಭಾಸ್ಕರ ಗೌಡ ಐಡಿಯಲ್, ಸೋಮನಾಥಪೂಜಾರಿ,
ಕೇಶವ ನಾಯಕ್ ಸುಳ್ಯ, ಸತ್ಯ ಪ್ರಸಾದ್ ಕೆ, ವಿನಯ ಕುಮಾರ್ ಕಂದಡ್ಕ, ದಾಮೋದರ ಮಂಚಿ, ಶಶಿಧರ ಆಚಾರ್ಯ ಸುಳ್ಯ, ಶಿವಪ್ರಸಾದ್ ಆಲೆಟ್ಟಿ, ಜಗದೀಶ್ ಕೆರೆಮೂಲೆ ಮತ್ತಿತರರು ಉಪಸ್ಥಿತರಿದ್ದರು.







