ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಸ್ಥಾನದಲ್ಲಿ ಭಕ್ತಾದಿಗಳ ಸಭೆ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕದಲ್ಲಿ ಭಕ್ತಾದಿಗಳ ಸಭೆ ಮೇ. 17ರಂದು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ವಿಶ್ವಸ್ಥರಾದ ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಉಪಾಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ ಬಜನಿಗುತ್ತು, ಮಾರ್ಗದರ್ಶಕ ಮಂಡಳಿ ಸದಸ್ಯ ಬಾಳಿಲ ರಾಮಚಂದ್ರ ರಾವ್ ಗೋಕುಲ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಾಥ್ ರೈ, ಕಾರ್ಯಾಧ್ಯಕ್ಷ ಚಂದ್ರಶೇಖರ ರೈ ಬಜನಿ, ಆನಂದ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಪ್ರಭಾಕರ ಆಳ್ವ ಬಜನಿಗುತ್ತು ಲೆಕ್ಕಪತ್ರ ಮಂಡಿಸಿದರು. ಪ್ರಶಾಂತ್ ಕುಮಾರ್ ಕಿಲಂಗೋಡಿ ಸ್ವಾಗತಿಸಿ, ವಂದಿಸಿದರು. ಸೇವಾ ಸಮಿತಿ ಸದಸ್ಯರಾದ ರಾಮ್ ಪ್ರಸಾದ್ ಕಾಂಚೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು‌. ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.