ಜೇಸಿಐ ಸುಳ್ಯ ಪಯಸ್ವಿನಿ(ರಿ.) ಸುಳ್ಯ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕ ಇದರ ಸಂಯೋಜಕತ್ವದಲ್ಲಿ ವಿಶ್ವ ತಾಯಂದಿರ ದಿನದ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ “ಮಾಮ್ ಅಂಡ್ ಮಿ – ತಾಯಿಯೊಂದಿಗೆ ನಾನು” ಫೋಟೋ ಸ್ಪರ್ಧೆ ಆಯೋಜಿಸಿದ್ದು, ಛಾಯಾಚಿತ್ರವನ್ನು ಆಹ್ವಾನಿಸಲಾಗಿದೆ.
ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದ್ದು,
ವಿಭಾಗ 1 : 1ರಿಂದ 5 ವರ್ಷ
ವಿಭಾಗ 2 : 5 ರಿಂದ 10 ವರ್ಷ














ಅವಿಭಜಿತ ಸುಳ್ಯ ತಾಲೂಕಿನ ಗ್ರಾಮಗಳಾದ ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ, ಪೆರಾಜೆ, ಸಂಪಾಜೆ, ಚೆಂಬು, ಬೆಳ್ಳಿಪ್ಪಾಡಿ, ದೇಲಂಪಾಡಿ, ಕಲ್ಲಪ್ಪಳ್ಳಿಯವರು ಇದರಲ್ಲಿ ಭಾಗವಹಿಸಲು ಅವಕಾಶವಿದೆ.
ಭಾಗವಹಿಸುವ ಸ್ಪರ್ಧಾಳುಗಳು ತಾಯಿ ಮಗುವಿನ ಜೊತೆಗಿನ ಪೋಸ್ಟ್ ಕಾರ್ಡ್ ಅಳತೆಯ ಸ್ಪಷ್ಟ (ಕ್ಲಾರಿಟಿ ಇರುವ) ಕಲರ್ ಪೋಟೋವನ್ನು ಮಗುವಿನ ಆಧಾರ್ ಕಾರ್ಡು ಅಥವಾ ಜನನ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆಯೊoದಿಗೆ ಮೇ 30ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು ಕೋರಿದೆ.
ಅಸ್ಪಷ್ಟ ಭಾವಚಿತ್ರವನ್ನು ಪರಿಗಣಿಸಲಾಗುವುದಿಲ್ಲ.
ಫೋಟೋದ ಜೊತೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಿ.
ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
ಕಳುಹಿಸಬೇಕಾದ ವಿಳಾಸ:
ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ
ಅಧ್ಯಕ್ಷರು, ಜೇಸಿಐ ಸುಳ್ಯ ಪಯಸ್ವಿನಿ
C/o. ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು
ಅಂಬಟಡ್ಕ, ಕುರುಂಜಿಭಾಗ್, ಸುಳ್ಯ -574327. ಹೆಚ್ಚಿನ ಮಾಹಿತಿಗಾಗಿ : 8105028180, 8147453575 ಸಂಪರ್ಕಿಸಬಹುದು.







