ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘವಿದ್ಯಾರ್ಥಿ ನಾಯಕನಾಗಿ ವಿಕಾಸ್ ಆಯ್ಕೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು. ಇ ವಿ ಎಂ ಮೂಲಕ ಮಕ್ಕಳು ಮತದಾನ ಮಾಡಿದರು. ಶಾಲಾ ನಾಯಕನಾಗಿ ವಿಕಾಸ್ (10ನೇ ಆ.ಮಾ), ಉಪನಾಯಕಿಯಾಗಿ ಹವ್ಯಶ್ರೀ ಆರ್ (10ನೇ ಕ.ಮಾ), ಜತೆ ಕಾರ್ಯದರ್ಶಿಯಾಗಿ ಉದಿತ್ (9ನೇ ಕ.ಮಾ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜ್ಞಾನೇಶ್ ಕೆ (9ನೇ ಆ.ಮಾ), ಕ್ರೀಡಾ ಕಾರ್ಯದರ್ಶಿಯಾಗಿ ಆರ್ಯ ಕೇನಾಜೆ ( 9ನೇ ಆ.ಮಾ), ವಿರೋಧ ಪಕ್ಷದ ನಾಯಕಿಯಾಗಿ ಜಾನ್ವಿ ಎಂ ವಿ ( 9ನೇ ಆ.ಮಾ), ಸಭಾಪತಿಯಾಗಿ ಫಾತಿಮತ್ ಫೈರೂಝಾ (10ನೇ ಆ.ಮಾ) ಆಯ್ಕೆಯಾಗಿರುತ್ತಾರೆ. ಉಳಿದಂತೆ ಶಿಸ್ತು ಪಾಲನಮಂತ್ರಿಯಾಗಿ ನಿಶಾಂತ್ ಕೆ ಜಿ (10), ಶ್ರೀರತ್ ವಿ ರೈ (9), ಸೂರಜ್ ಬಿ ಆರ್ (9) ನೀರಾವರಿ ಮಂತ್ರಿಯಾಗಿ ಶಿಶಿರ್ ರೈ ಕೆ (10), ಜೀವನ್ ಎಂ (9), ಅವನಿ ಎಚ್ ಆರ್ (9) ಭಜನಾ ಮಂತ್ರಿಯಾಗಿ ಎಂ ಆರ್ ಗಗನ್ ರಾಜ್ (10), ಭವಿಷ್ಯ ರೈ (10), ವಂಶಿಕ ಡಿ ವಿ (9), ದೀಕ್ಷಾ ಎಚ್ ಎನ್ (9) ಆಹಾರ ಸರಬರಾಜು ಮಂತ್ರಿಯಾಗಿ ಶ್ರೀಕಾಂತ್ ಎಂ ಭಟ್ (10), ಆಶ್ಲೇಷ್ ಸಿ ಎಂ (9), ಸಂಜನ್ ಎ ಆರ್ (9), ಸ್ವಚ್ಛತಾ ಪಾಲನಾಮಂತ್ರಿಯಾಗಿ ಶ್ರೀನಿಧಿ ಎಂ ಭಟ್ (10), ಸಾನಿಧ್ಯ ಎಸ್ ಯು (9), ಚಾರ್ವಿ (9) ಕೃಷಿ ಮಂತ್ರಿಯಾಗಿ ಕುಮಾರ ಸುಬ್ರಹ್ಮಣ್ಯ (10), ಶ್ರೇಷ್ಠ ಪಿ ಸಿ (9), ಧರಣ್ ರೈ ಎಸ್ (9) ಆರೋಗ್ಯಮಂತ್ರಿಯಾಗಿ ಶ್ರೀಮಾ ಕೆ ಎಚ್ (10), ಕುಶ್ಯ ಡಿ ಗೌಡ (9), ಕಾರ್ತಿಕ್ ಕೆ (9) ವಾರ್ತಾ ಮಂತ್ರಿಯಾಗಿ ಹರ್ಷ ಯು ಪಿ (10), ಅಸ್ಮಿ ಕೆ ಪಿ (9), ಸಿದೀಕ್ಷಾ ರೈ ಟಿ (9) ಆಯ್ಕೆಯಾದರು.


ಹಿರಿಯ ಶಿಕ್ಷಕಿ ಪುಷ್ಪ ಬಿ ಜೆ ಚುನಾವಣಾಧಿಕಾರಿಯಾಗಿ ಮತದಾನ ಪ್ರಕ್ರಿಯೆಯನ್ನು ನೆರವೇರಿಸಿದರು. ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಟ್ರಸ್ಟಿಗಳಾದ ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಶಾಲಾಡಳಿತ ಅಧಿಕಾರಿಗಳು, ಮುಖ್ಯಗುರುಗಳು, ಶಿಕ್ಷಕ ಶಿಕ್ಷಕೇತರ ವೃಂದದವರು ವಿಜೇತರನ್ನು ಅಭಿನಂದಿಸಿದರು. ಶಿಕ್ಷಕಿಯರಾದ ಭಾರತಿ ಕೆ ಟಿ, ಸೌಮ್ಯ ರೈ, ಭವಾನಿ ಸಿ ಕಾರ್ಯಕ್ರಮವನ್ನು ಸಂಘಟಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಸಹಕರಿಸಿದರು.