ಸಮಸ್ತ 100ನೇ ಸ್ಥಾಪಕ ದಿನದ ಪ್ರಯುಕ್ತ ಮೊಗರ್ಪಣೆ ಜುಮಾ ಮಸೀದಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ

0

ಸಮಸ್ತದ 100ನೇ ಸ್ಥಾಪಕ ದಿನದ ಅಂಗವಾಗಿ ಮೊಗರ್ಪಣೆ ಜುಮಾ ಮಸೀದಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಮಸೀದಿ ಮುದರ್ರಿಸರಾದ ಅಬ್ದುಲ್ ಖಾದರ್ ಸಕಾಫಿ ಅಲ್ ಕಾಮಿಲ್ ಮುದುಗಡ ಹಾಗೂ
ಹಿದಾಯತುಲ್ ಇಸ್ಲಾಂ ಜಮಾತ್ ಕಮಿಟಿ ಮೊಗರ್ಪಣೆ ಇದರ ಅಧ್ಯಕ್ಷರಾದ ಸಿ ಎಂ ಉಸ್ಮಾನ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಎಸ್‌ವೈಎಸ್ ಮೊಗರ್ಪಣೆ ಶಾಖೆಯ ಅಧ್ಯಕ್ಷ ಅಬ್ದುಲ್ಲಾ ಡಿ ಎಂ, ಕಾರ್ಯದರ್ಶಿ ಶಮೀರ್ ಡಿ ಎಚ್, ಕರ್ನಾಟಕ ಮುಸ್ಲಿಂ ಜಮಾತ್ ಸಂಘಟನೆಯ ಮುಖಂಡ ಹಾಜಿ ಮುಸ್ತಫ ಮೊಗರ್ಪಣೆ, ವಕ್ಫ್ ಬೋರ್ಡ್ ಮುಖಂಡ ಅಬ್ದುಲ್ ರಹಮಾನ್ ಮೊಗರ್ಪಣೆ, ಮುಖಂಡರಾದ ಎಸ್ಎಎಸ್ ಮಹಮ್ಮದ್ ಹಾಜಿ, ಹಸನ್ ಹಾಜಿ ಬಾಳೆಮಕ್ಕಿ,ಡಿ ಇಬ್ರಾಹಿಂ, ಹಾಜಿ ಅಬ್ದುಲ್ ರಜಾಕ್ ಶೀತಲ್, ಹಾಗೂ ಎಸ್ ಎಸ್ ಎಫ್ ಸಂಘಟನೆಗಳ ಮುಖಂಡರುಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.