














ಪಡ್ಪಿನಂಗಡಿ ಸಮೀಪದ ಕಲ್ಮಡ್ಕ ಗ್ರಾಮದ ಮಮತಾ ನಡ್ಕ ಅವರ ಮನೆ ಸಮೀಪವಿದ್ದ ಹಳೆ ವಾಸದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಅಪಾರ ನಷ್ಟ ಸಂಭವಿಸಿದೆ.
ಇಂದು ಮುಂಜಾನೆ ಈ ಘಟನೆ ನಡೆದಿದೆ. ಕಟ್ಟಡದ ಒಳಗಿದ್ದ ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ ಶೀಟ್ ಸೇರಿದಂತೆ ಕೃಷಿ ಉತ್ಪನ್ನಗಳು ಹೊತ್ತಿ ಉರಿದಿದೆ. ಕಟ್ಟಡ ಕೂಡ ಹೊತ್ತಿ ಉರಿದಿದ್ದು ಅಪಾರ ನಷ್ಟ ಸಂಭವಿಸಿದೆ. ಈ ವೇಳೆ ಪಕ್ಕದ ಕಟ್ಟಡಕ್ಕೂ ಬೆಂಕಿ ತಗುಲಿದೆ. ಸ್ಥಳಕ್ಕೆ ಅಗ್ನಿಶಾಮಕ ದಳವರು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ವಿಷಯ ತಿಳಿದು ಸ್ಥಳೀಯರು ಆಗಮಿಸಿದ್ದು ಕಾರ್ಯಾಚರಣೆಕ್ಕೆ ಸಹಕರಿಸಿದ್ದಾರೆ.







