













ಸಂಪಾಜೆ ರಂಗ ಸಂಗಮ ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಕನ್ನಡ ಭವನ ನಯನ ರಂಗಮಂದಿರ ದಲ್ಲಿ ನಡೆದ ‘ಸಾಂಸ್ಕೃತಿಕ ಸಂಭ್ರಮ ‘ ಕಾರ್ಯಕ್ರಮದಲ್ಲಿ ಕಲಾ ಸಾಧನೆಗಾಗಿ ನೃತ್ಯ ಕಲಾವಿದೆ, ನೃತ್ಯ ಶಿಕ್ಷಕಿ ವಿದುಷಿ ಸವಿತಾ ಕಿರಣ್ ( ಸವಿತಾ ಬೊಳುಗಲ್ಲು ) ತೊಡಿಕಾನ ಅವರಿಗೆ ‘ ಪ್ರತಿಭಾ ಪುರಸ್ಕಾರ ‘ ನೀಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಸವಿತಾ ಅವರು ತೊಡಿಕಾನ ಬೊಳುಗಲ್ಲು ದಿ. ಕೇಶವ ಮತ್ತು ಪದ್ಮಾವತಿ ಇವರ ಪುತ್ರಿ ಯಾಗಿದ್ದು – ಕಿರಣ್ ಕಾಡುಪಂಜ ಇವರ ಪತ್ನಿ.
ಕಾರ್ಯಕ್ರಮದ ಸಂಘಟ ಕರಾದ ರಾಜ್ ಸಂಪಾಜೆ, ಪತ್ರಕರ್ತ ಕಿರಣ್ ಹನಿಯಡ್ಕ ಸೇರಿದಂತಡ ಹಲವು ಗಣ್ಯರು ವೇದಿಕೆಯಲ್ಲಿದ್ದರು.







