ಸುಳ್ಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ: ಜು.1 ರಂದು ಪದಗ್ರಹಣ

0

ಅಧ್ಯಕ್ಷೆಯಾಗಿ ಡಾ. ಪ್ರಜ್ಞಾ ಎಂ.ಆರ್. , ಕಾರ್ಯದರ್ಶಿಯಾಗಿ ಡಾ|ಸ್ಮಿತಾ ಹರ್ಷ , ಕೋಶಾಧಿಕಾರಿಯಾಗಿ ಶ್ರೀಮತಿ ಉಷಾ ಸಿ. ಶೆಟ್ಟಿ

ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶ್ರೀಮತಿ ಡಾ. ಪ್ರಜ್ಞಾ ಎಂ.ಆರ್, ಕಾರ್ಯದರ್ಶಿಯಾಗಿ ಡಾ|ಸ್ಮಿತಾ ಹರ್ಷ ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ಉಷಾ ಸಿ.ಶೆಟ್ಟಿರವರು ಆಯ್ಕೆಯಾಗಿರುತ್ತಾರೆ.

ಉಪಾಧ್ಯಕ್ಷೆಯಾಗಿ ಶ್ರೀಮತಿ ನಯನ ಹರಿಪ್ರಸಾದ್, ಐಪಿಪಿಯಾಗಿ ಡಾ.ಸವಿತಾ ಹೊದ್ದೆಟ್ಟಿ, ಎಡಿಟರ್ ಆಗಿ ಶ್ರೀಮತಿ ಸುಜಾತ ಕಾಮತ್, ಐಎಸ್‌ಒ ಆಗಿ ಶ್ರೀಮತಿ ಸೌಮ್ಯ ರವಿಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ವಿಜಯ ಕಸ್ತೂರಿ ಶಂಕರ್, ಪದಾಧಿಕಾರಿಗಳಾಗಿ ಶ್ರೀಮತಿ ಮೀನಾಕ್ಷಿ ಹೇಮನಾಥ್, ಶ್ರೀಮತಿ ಜಯಲಲಿತಾ ಸಿ, ಶ್ರೀಮತಿ ಯೋಗಿತಾ ಗೋಪಿನಾಥ್, ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ.

ನೂತನ ತಂಡದ ಪದಗ್ರಹಣ ಸಮಾರಂಭವು ಜು.1 ರಂದು ಸಂಜೆ 4 ಗಂಟೆಗೆ ರೋಟರಿ ಸಭಾಂಗಣದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ದಂತ ವೈದ್ಯೆ & ಐಡಿಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ವಿದ್ಯಾಶಾರದ ಉಪಸ್ಥಿತರಿರುವರು ಎಂದು ಅಧ್ಯಕ್ಷೆ ಡಾ.ಪ್ರಜ್ಞಾ ಎಂ.ಆರ್.ತಿಳಿಸಿದ್ದಾರೆ.