














ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 200 ವಿದ್ಯಾರ್ಥಿಗಳಿಗೆ ಶ್ರೀ ದುರ್ಗಾ ಸೇವಾ ಸಂಘ ಕೇನ್ಯ ಇವರ ಆಶ್ರಯದಲ್ಲಿ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್, ಮುಂಬೈ ಇವರ ವತಿಯಿಂದ ಉಚಿತವಾಗಿ ಬರೆಯುವ ಪುಸ್ತಕಗಳನ್ನ ವಿತರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಮುಂಬೈ ಇದರ ಗೌರವಾಧ್ಯಕ್ಷೆ ಶ್ರೀಮತಿ ಚಿತ್ರರವಿರಾಜ ಶೆಟ್ಟಿ ನೆರವೇರಿಸಿದರು. ಅವರು ಮಾತನಾಡುತ್ತಾ” ಕನ್ನಡ ಶಾಲೆ ಯನ್ನ ಉಳಿಸಬೇಕು ಹಾಗೂ ಬೆಳೆಸಬೇಕಾಗಿದೆ. ಅದರಲ್ಲೂ ಇಂದು ಗ್ರಾಮಾಂತರದಲ್ಲಿರುವ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿರುವುದು ಶೋಚನೀಯ. ಇಂದು ರಾಜ್ಯ ಸರಕಾರ ಸರ್ಕಾರಿ ಶಾಲೆಗಳಿಗೆ ಬೇಕಾದಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಆದ್ದರಿಂದ ನಾವೆಲ್ಲರೂ ಸೇರಿ ಕನ್ನಡ ಶಾಲೆಯನ್ನ ಉಳಿಸೋಣ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಪಂಜ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಿಗೋದರ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದುರ್ಗಾ ಸೇವಾ ಸಂಘ ಕೇಂದ್ರ ಅಧ್ಯಕ್ಷ ಪದ್ಮನಾಭ ರೈ, ಕಾರ್ಯದರ್ಶಿ ದೇವಿ ಪ್ರಸಾದ್ ರೈ, ನಿರ್ದೇಶಕರುಗಳಾದ ಬಾಲಕೃಷ್ಣ ರೈ ಬಿರ್ಕಿ, ಪ್ರಕಾಶ್ ಆಚಾರ್ಯ ಕೇನ್ಯ, ರಾಧಾಕೃಷ್ಣ ನಾದೂರು ಹಾಗೂ ಮುಂಬೈ ಓಂ ಶಕ್ತಿ ಮಹಿಳಾ ಸಂಸ್ಥೆ, ಕಲ್ಯಾಣ್ ಇದರ ಸದಸ್ಯರುಗಳಾದ ಶ್ರೀಮತಿ ಜಯಶ್ರೀ ಕೆ. ಶೆಟ್ಟಿ, ಶ್ರೀಮತಿ ಉಷಾ ಆನಂದ ಶೆಟ್ಟಿ, ಗ್ರೀಷ್ಮಾ ಪಿ. ಶೆಟ್ಟಿ, ಸವಿತಾ ಎಸ್. ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಸೌಮ್ಯಶ್ರೀ, ಸದಸ್ಯರುಗಳಾದ ದಾಮೋದರ ನೆರಳ, ವೇದಾವತಿ, ಯಕ್ಷಿತ, ಧನ್ಯಶ್ರೀ ಉಪಸ್ಥಿತರಿದ್ದರು.

ಪಂಜ ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ ಮುಂಬೈ ಇದರ ಗೌರವಾಧ್ಯಕ್ಷೆ ಶ್ರೀಮತಿ ಚಿತ್ರರವಿರಾಜ್ ಶೆಟ್ಟಿಯವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಮಂಜುಳಾ ಅಭಿನಂದನಾ ಪತ್ರ ವಾಚಿಸಿದರು. ಶಿಕ್ಷಕರಾದ ಮೋಹನ್ ಪ್ರಸಾದ್, ಚೇತನ, ವಿನುತ, ಸುಮಿತ್ರ, ದಿವ್ಯಶ್ರೀ, ಸಹಾಯಕಿಯರಾದ ನಮಿತಾ, ಲಿಖಿತ, ಮಂಜುಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶಿವಾನಂದ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ನೇತ್ರ ವಂದಿಸಿದರು.







