ಕನಕಮಜಲು : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

0

ಪ್ರಯಾಣಿಕರಿಗೆ ಗಾಯ

ಸುಳ್ಯದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರೊಂದಕ್ಕೆ ಕನಕಮಜಲು ಗ್ರಾಮದ ಗುಡ್ಡಡ್ಕ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು‌ ಬಿದ್ದು ಕಾರಿನಲ್ಲಿದ್ದವರು ಗಾಯಗೊಂಡಿರುವ ಘಟನೆ ಜು.5ರಂದು‌ ಸಂಜೆ ವರದಿಯಾಗಿದೆ.

ಕೆಂಪು ಬಣ್ಣದ ಸ್ವಿಫ್ಟ್ ‌ಕಾರು ಇದಗಿದ್ದು ಕಾರಿನ ಎದುರು‌ವಿಷ್ಟು ನಾರ್ಕೋಡು ಎಂದು ಬರೆಯಲಾಗಿದೆ. ಕಾರಿನಲ್ಲಿದ್ದವರಿಗೆ‌ ಗಾಯವಾಗಿದ್ದು ಅವರು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬಗಳು ತುಂಡಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ.