ಭಾರಿ ಮಳೆ: ಸುಳ್ಯದ ಉತ್ತರ ಬೀರಮಂಗಲದಲ್ಲಿ ತಡೆಗೋಡೆ ಕುಸಿತ- ಬರೆ ಕುಸಿಯುವ ಆತಂಕ

0

ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

ಸುಳ್ಯ :ಉತ್ತರ ಬೀರಮಂಗಲದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಆ 1ರಂದು ತಡೆಗೋಡೆ ಕುಸಿತ ಮತ್ತು ಇನ್ನೆರಡು ಕಡೆಗಳಲ್ಲಿ ಬರೆ ಕುಸಿಯುವ ಭೀತಿ ಕಾಣುತ್ತಿದ್ದು ಸ್ಥಳೀಯ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದು ವಿ ಎ ತಿಪ್ಪೇಶ್, ನಗರ ಪಂಚಾಯತ್ ಮಾಜಿ ಸದಸ್ಯ ಧೀರಾ ಕ್ರಾಸ್ತಾರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಿವೃತ್ತ ಫಾರೆಸ್ಟರ್ ದಿ.ಪದ್ಮಯ ಗೌಡ ರವರ ಮನೆಯ ತಡೆಗೋಡೆ ಕುಸಿತಗೊಂಡು ಭಾರಿ ನಷ್ಟ ಉಂಟಾಗಿದ್ದು ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬ ಬೀಳಲು ಸಿದ್ಧವಾಗಿ ನಿಂತಿದೆ.ಅಸಮರ್ಪಕ ಚರಂಡಿ ವ್ಯವಸ್ಥೆ ಇರುವ ಕಾರಣ ಮಳೆ ನೀರು ಕಾಂಪೌಂಡಿಗೆ ಬೀಳುತ್ತಿದ್ದು ಈ ಘಟನೆ ಸಂಭವಿಸಿದೆ ಎಂದು ಮನೆಯವರು ದೂರಿ ಕೊಳ್ಳುತ್ತಿದ್ದಾರೆ.

ಉತ್ತರ ಬೀರಮಂಗಲದ ಕಜೆ ಕಾಂಪೌಂಡ್ ಬಳಿ ಜೋಸೆಫ್ ಎಂಬುವರ ಮನೆಯ ಹಿಂಭಾಗಕ್ಕೆ ಮಣ್ಣು ಕುಸಿತ ಉಂಟಾಗಿ ಮನೆಯವರು ಆತಂಕದಲ್ಲಿದ್ದಾರೆ.ಅದೇ ಪ್ರದೇಶದಲ್ಲಿ ಮುಖ್ಯರಸ್ತೆಯ ಬರೆಯ ಮಣ್ಣುಕುಸಿಯುತಿದ್ದು ಅಲ್ಲಿಯ ನಿವಾಸಿಗಳು ಆತಂಕದಲ್ಲಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಇಲಾಖೆಗಳಿಗೆ ದೂರನ್ನು ನೀಡಿದ್ದರು ಯಾವುದೇ ಸ್ಪಂದನೆ ಇಲ್ಲ ಎಂದು ಸ್ಥಳೀಯರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗಹಿಸಿದ್ದಾರೆ.

ಸ್ಥಳಕ್ಕೆ ವಿ ಎ ತಿಪ್ಪೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯತ್ ಮಾಜಿ ಸದಸ್ಯ ಧೀರಾ ಕ್ರಾಸ್ತಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.