ಚೆಂಬು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿ , ಅಗಲಿದ ದಿ. ಆದo ಕುಂಞಿ ಸೆಂಟ್ಯಾರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ಜುಲೈ 30 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ಯು. ಪಿ ಶಿವಾನಂದರವರು ಅಧ್ಯಕ್ಷತೆ ವಹಿಸಿ ದಿ .ಆದo ಕುಂಞಿ ಸೆಂಟ್ಯಾರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ , ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನುಡಿ ನಮನ ಸಲ್ಲಿಸಿದರು.














ಬಳಿಕ ಅಗಲಿದ ದಿ. ಆದಂಕುಂಞಿ ಸೆಂಟ್ಯಾರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು.

ನಿವೃತ್ತ ಉಪನ್ಯಾಸಕರು ಕರುಣಾಕರ ನಿ ಡಿಂಜಿ, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಂತ ಎನ್ .ಸಿ , ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪಿ. ಟಿ ರಮೇಶ್, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ , ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿದ್ದಪ್ಪ, ಶ್ರೀಮತಿ ಲೀಲಾವತಿ ಜಯಪ್ರಕಾಶ್ , ಹಿರಿಯ ಸಹೋದರ ಅಬ್ಬಾಸ್ ಹಾಜಿ ಸೆಂಟ್ಯಾರು , ಮಕ್ಕಳಾದ ಆಶಿಕ್, ವಾಜಿದ್ ವೇದಿಕೆಯಲ್ಲಿ ಉಪಸ್ಥಿತರಿದ್ದು ನುಡಿನಮನ ಮಾತುಗಳನ್ನಾಡಿದರು.
ಗ್ರಾಮಸ್ಥರ ಪರವಾಗಿ ಶ್ರೀನಿವಾಸ ನಿಡಿಂಜಿ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಅಧ್ಯಕ್ಷ ಅಧ್ಯಕ್ಷ ನೆರವಂಡ ಉಮೇಶ,
ಡಾ.ಯೋಗೀಶ್, ಲೋಕನಾಥ ಅಮೆಚೂರು, ಸಂಜೀವ ಪೂಜಾರಿ ಬಾಲೆಂಬಿ, ಹರೀಶ್ ಊರು ಬೈಲು , ಸಂಪಾಜೆ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಲೋಕ್ಯಾ ನಾಯ್ಕ್, ನಿವೃತ್ತ ಶಿಕ್ಷಕರಾದ ಶೇಷಪ್ಪ ಚೌಟಾಜೆ ಅವರು ಮೃತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು .

ಬಳಿಕ ಸಾವರ್ಜನಿಕರಿಂದ ಲಂಚ ಭ್ರಷ್ಟಾಚಾರ ಫಲಕ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಂತರ ಆಗಮಿಸಿದ ಎಲ್ಲರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಚೆಂಬು, ಸಂಪಾಜೆ , ಕಲ್ಲುಗುಂಡಿ ಅಭಿಮಾನಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು .
ರವಿರಾಜ್ ಹೊಸೂರು, ದಿನೇಶ್ ಪೂಜಾರಿ ಗದ್ದೆ, ಚೆನ್ನ ಕೇಶವ ಬಾಲೆoಬಿ, ಲೋಕೇಶ್ ಕಾಡುಪಂಜ
ಪದ್ಮನಾಭ ಮಂಗಳಪಾರೆ, ಶ್ರೀನಿವಾಸ ನಿಡಿಂಜಿ, ನವೀನ ರಾಮಕಜೆ, ಜಯಪ್ರಕಾಶ್ ಪನೇಡ್ಕ , ಬೋಜಪ್ಪ ಗುಂಡಿಮಜಲು, ಕೇಶವ ಪನೇಡ್ಕ , ರೋಹಿತ್ ಪನೇಡ್ಕ, ಗಗನ್ ಕಾಡುಪಂಜ, ಆನಂದ ತಾಮ್ರ ಕಟ್ಟೆ , ಪ್ರಸನ್ನ ಪೂಜಾರಿಗದ್ದೆ , ಶಿವರಾಮ ಪೂಜಾರಿ ಬಾಲೆಂಬಿ, ರಘುನಾಥ್ ಬಾಲಂಬಿ, ರಕ್ಷಿತ್ ನಿಡಿಂಜಿ ,ಇತರರು , ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಊರಿನ ಗ್ರಾಮಸ್ಥರು ಸಹಕರಿಸಿದರು.

ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಕಾರ್ಯಕರ್ತ ಸೂರಜ್ ಹೊಸೂರು ಸ್ವಾಗತಿಸಿ, ರಮೇಶ್ ನಂಬ್ಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿ , ಲೋಕೇಶ್ ಊರುಬೈಲು ನಿರೂಪಿಸಿದರು.

ಆಗಮಿಸಿದ ಎಲ್ಲಾರಿಗೂ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಾಗೂ ಕುಕ್ಕೇಟಿ ಶಾಮಿಯಾನ ಚೆಂಬು , ಪಂಚಶ್ರೀ ಸೌಂಡ್ಸ್ ಕಲ್ಲುಗುಂಡಿ, ಜಲೇoದ್ರ ವೆಜಿಟೆಬಲ್ ಕಲ್ಲುಗುಂಡಿ ರವರು ಕಾರ್ಯಕ್ರಮಕ್ಕೆ ಸಹಕರಿಸಿದರು.







