ಸುಳ್ಯದ ಗಾಂಧಿನಗರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ

0

ಕರ್ನಾಟಕ ಸರ್ಕಾರ ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಸುಳ್ಯ ಇವರ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶೈನಾಜ್ ರವರ ಅಧ್ಯಕ್ಷತೆಯಲ್ಲಿ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಆ.6ರಂದು ನಡೆಯಿತು.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯ ಸಮುದಾಯ ಆರೋಗ್ಯ ವಿಭಾಗದ ಮಕ್ಕಳ ತಜ್ಞರಾದ ಡಾ. ಸುನಿತಾ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಎದೆ ಹಾಲಿನ ಮಹತ್ವ, ತಾಯಿ ಮತ್ತು ಮಗುವಿಗೆ ಆಗುವ ಉಪಯೋಗಗಳು, ಎದೆ ಹಾಲುಣಿಸುವಿಕೆಯ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳು, ಆರು ತಿಂಗಳ ತನಕ ಕೇವಲ ಎದೆ ಹಾಲು ಮಾತ್ರ, ನಂತರ ಮೇಲಾಹಾರ ಮತ್ತು ನಿರ್ಜಲೀಕರಣವಾದಾಗ ಅಥವಾ ವಾಂತಿ ಭೇದಿ ಯಾದಾಗ ಮಕ್ಕಳಿಗೆ ಒ ಆರ್ ಎಸ್ ಕೊಡುವ ವಿಧಾನ, ಮನೆಯಲ್ಲಿ ಓ ಆರ್ ಎಸ್ ತಯಾರಿಸುವ ವಿಧಾನ ಮುಂತಾದ ವಿಷಯಗಳು ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಇಲಾಖೆಯಿಂದ ವಲಯ ಮೇಲ್ವಿಚಾರಕಿ ಶ್ರೀಮತಿ ವಿಜಯ ರವರು ಇಲಾಖೆಯ ಸೌಲಭ್ಯಗಳು, ಶೀಘ್ರ ನೋಂದಣಿ ಸಮುದಾಯಧಾರಿತ ಕಾರ್ಯಕ್ರಮ ನಡೆಸುವ ಉದ್ದೇಶ, ಬಗ್ಗೆ ಮಾಹಿತಿ ನೀಡಿದರು.


ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕನಕಾಂಗಿ ಚುಚ್ಚುಮದ್ದು ಸೇವೆಗಳನ್ನು ನಿಗದಿತ ಸಮಯದಲ್ಲಿ ಪಡೆದುಕೊಳ್ಳುವಂತೆ, ತಾಯಿ ಕಾರ್ಡು ಕೇಳಿ ಪಡೆದುಕೊಳ್ಳುವ ಬಗ್ಗೆ ಸಲಹೆ ನೀಡಿದರು.


ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಸುನಿತಾ ಸಭೆಯಲ್ಲಿ ಭಾಗವಹಿಸಿದವರ ಬಿಪಿ ಮತ್ತು ಶುಗರ್ ತಪಾಸಣೆಗಳನ್ನು ನಡೆಸಿದರು. ಅಂಗನವಾಡಿ ಕಾರ್ಯಕರ್ತೆ ಸುನೀತ ಸ್ವಾಗತಿಸಿ, ವಂದಿಸಿದರು.