ಗ್ರಾಮಸ್ಥರ ಒಕ್ಕೊರಲ ವಿರೋಧ
ಉಬರಡ್ಕಮಿತ್ತೂರು ಗ್ರಾಮವನ್ನು ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಿಸುತ್ತಿರುವ ಕುರಿತು ಗ್ರಾಮಸ್ಥರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು, ವಿಶೇಷ ಗ್ರಾಮ ಸಭೆಯು ಸೆ.17 ರಂದು ಉಬರಡ್ಕಮಿತ್ತೂರು ಸಿರಿ ಸಹಕಾರಿ ಸೌಧ ಇಲ್ಲಿ ನಡೆಯಿತು.














ಕಸ್ತೂರಿ ರಂಗನ್ ವರದಿಯಿಂದ ಕೃಷಿಕರಿಗೆ ಆಗುವ ಸಾಧಕದ ಜೊತೆ ಭಾಧಕಗಳ ಕುರಿತು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ್ ಮಾತನಾಡಿದರು.
ಈ ವರದಿಯಿಂದ ಗ್ರಾಮಸ್ಥರಿಗೆ, ಕೃಷಿಕರಿಗೆ ಅನೇಕ ತೊಂದರೆಗಳಾಗುತ್ತದೆ. ಎಂದು ರವಿಕುಮಾರ್ ಮೈರಾಜೆ, ಸೀತಾನಂದ ಬೇರ್ಪಡ್ಕ, ಸಹಕಾರಿ ಸಂಘದ ನಿರ್ದೇಶಕ ರಾಜೇಶ್ ಭಟ್ ನೆಕ್ಕಿಲ, ಉದಯಪ್ರಕಾಶ್ ನೆಕ್ಕಿಲ, ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಹಿರಿಯರಾದ ಚಂದ್ರಶೇಖರ ಪಾನತ್ತಿಲ, ವೆಂಕಟ್ರಾಮ್ ಯು.ಎಸ್, ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಮೊದಲಾದವರು ಮಾತನಾಡಿದರು.
ಗ್ರಾಮಸ್ಥರ ಒಕ್ಕೊರಲ ನಿರ್ಧಾರದ ಮನವಿಯನ್ನು ಕೊನೆಯಲ್ಲಿ ಸಹಕಾರಿ ಸಂಘ ಮತ್ತು ಗ್ರಾಮಸ್ಥರ ಪರವಾಗಿ ಆಡಳಿತಾಧಿಕಾರಿ ಅರಬಣ್ಣ ಪೂಜೇರಿ ಇವರಿಗೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಅರಣ್ಯ ಇಲಾಖೆಯ ವಿನಾಯಕ ದುರ್ದುಂಡಿ ಉಪಸ್ಥಿತರಿದ್ದರು.







