ಅರಂತೋಡು ಶ್ರೀ ದುರ್ಗಾ ಮಾತಾ ಭಜನಾ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಯ ಆರೋಗ್ಯಕ್ಕೆ ಪ್ರಾರ್ಥನೆ

0

ಪ್ರಧಾನಿ ನರೇಂದ್ರ ಮೋದಿಯವರಿಗೆ 76 ವರುಷ ತುಂಬಿರುವ ಮತ್ತು ಸಾರ್ಥಕ 25 ವರ್ಷಗಳು ಪೂರೈಸಿದ ಪ್ರಯುಕ್ತ ಸೇವಾ ಸಂಕಲ್ಪದ ಅಂಗವಾಗಿ ಮೋದಿಜಿ ಅವರಿಗೆ ದೀರ್ಘಾಯುಷ್ಯ,ಆರೋಗ್ಯ ಹಾಗೂ ಉತ್ತಮ ಆಡಳಿತ ನೀಡುವ ಶಕ್ತಿ, ಚೈತನ್ಯ ಪ್ರಾಪ್ತಿಯಾಗಲಿಹಾಗು 2047 ನೇ ಇಸವಿಗೆ ನಮ್ಮ ದೇಶ ವಿಕಸಿತ ಭಾರತವಾಗಬೇಕೆಂಬ ಸಂಕಲ್ಪಕ್ಕಾಗಿ ಅರಂತೋಡು ಶ್ರೀ ದುರ್ಗಾ ಮಾತಾಭಜನಾ ಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ “ಆಶೀರ್ವಾದದ ದೀಪವನ್ನು ” ಬೆಳಗಿಸಲಾಯಿತು. ಜೊತೆಗೆ ಸಂಘದ ಶಾಖೆ ನಡೆಸಲಾಯಿತು ಸಂದರ್ಭದಲ್ಲಿ ಅರಂತೋಡು ಶಕ್ತಿ ಕೇಂದ್ರದ ಬಾ.ಜ.ಪಾ ಪಕ್ಷದ ಪ್ರಮುಖರು, ಪರಿವಾರ ಸಂಘಟನೆಯ ಕಾರ್ಯಕರ್ತರು ಗ್ರಾಮದ ಗಣ್ಯರು ಭಾಗವಹಿಸಿದ್ದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.