













ಉಡುಪಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಶ್ರೀಮತಿ ಸುಕನ್ಯಾ ಪ್ರವೀಣ್ ದೇರಾಜೆಯವರಿಗೆ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿಯಾಗಿದ್ದು ಅವರು ಉಡುಪಿ ನಗರ ಪೋಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸುಮಾರು 17 ವರ್ಷಗಳ ಕಾಲ ವಿವಿಧ ಕಡೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ನಿರ್ವಹಿಸಿದ ಇವರಿಗೆ ಇದೀಗ ಪದೋನ್ನತಿಯಾಗಿದೆ.
ಇವರು ಅರಂತೋಡು ಗ್ರಾಮದ ದೇರಾಜೆ ಪ್ರವೀಣ್ ಕುಮಾರ್ ಪತ್ನಿ. ಪ್ರವೀಣ್ ಕುಮಾರ್ ರವರು ಉಡುಪಿ ಅರಣ್ಯ ಇಲಾಖೆಯಲ್ಲಿ ಅರಣ್ಯ ಗಸ್ತು ಪಾಲಕರಾಗಿ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ.







