ಉರಗ ಸ್ನೇಹಿ ತಿಮ್ಮಪ್ಪ ಗೌಡ ಪಾಂಡಿಗದ್ದೆ ನಿಧನ

0

ಐವತ್ತೊಕ್ಲು ಗ್ರಾಮದ ಪಾಂಡಿಗದ್ದೆ ತಿಮ್ಮಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೆ.18 ರಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಅವರು ವಿಷಪೂರಿತ ಹಾವು ಮತ್ತು ಯಾವುದೇ ಹಾವುಗಳನ್ನು ಹಿಡಿಯುವುದರಲ್ಲಿ ಖ್ಯಾತರಾಗಿದ್ದರು.
ಜೊತೆಗೆ ಪಂಜದಲ್ಲಿ ಅನೇಕ ವರ್ಷಗಳಿಂದ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಮೃತರು, ತಾಯಿ, ಪತ್ನಿಯರು, ಮಕ್ಕಳು , ಸಹೋದರ, ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.