ವಿನೋಬಾನಗರದಲ್ಲಿ ಅಪಘಾತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು

0

ಜಾಲ್ಸೂರು ಗ್ರಾಮದ ವಿನೋಬಾನಗರದಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಬಸ್ ನಿಂದ ಇಳಿದು ರಸ್ತೆ ದಾಟುತಿದ್ದ ವ್ಯಕ್ತಿಗೆ ಹಿಂಬದಿಯಿಂದ ಬಂದ ಲಾರಿ ಢಿಕ್ಕಿಯಾಯಿತೆನ್ನಲಾಗಿದೆ. ಮುಖ‌ ಜಜ್ಜಿರುವುದರಿಂದ ಗುರುತು ಸಿಗುತ್ತಿಲ್ಲವೆಂದು ಹೇಳಲಾಗಿದೆ.‌ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.