ರಾಮಕೃಷ್ಣ ಅಲಂಕಲ್ಯ ರವರ ಅಪಘಾತದ ಬಗ್ಗೆ ಲಾರಿಯ ಮಹಜರು ನಡೆಸಿದ ಪೋಲಿಸರು

0

ಸುಮಾರು 3 ತಾಸು ಲಾರಿಯನ್ನು ಪರೀಕ್ಷಿಸಿದ ನ್ಯಾಯ ವಿಜ್ಞಾನ ಪ್ರಯೋಗಾಲಯ

ಬೊಳುಬೈಲಿನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಉದ್ಯಮಿ ರಾಮಕೃಷ್ಣ ಅಲಂಕಲ್ಯ ರವರು ಲಾರಿ ತಾಗಿ ಮೃತ ಪಟ್ಟಿರುತ್ತಾರೆ ಎಂಬಊಹಾಪೋಹಗಳಿದ್ದು ಲಾರಿಯ ಮಹಜರು ಪ್ರಕ್ರಿಯೆಯನ್ನು ಇಂದು ‌ನಡೆಸಲಾಯಿತು.

ಸ್ಕೂಟಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ
ಅಪಘಾತ ನಡೆದಿದ್ದು ಲಾರಿ ಚಾಲಕ ಲಾರಿ ತಾಗಿರುವ ಬಗ್ಗೆ ಅಲ್ಲಗಳೆದಿದ್ದರು. ಆದರೆ
ರಾಮಕೃಷ್ಣ ರವರ ಮನೆಯವರ ಹೇಳಿಕೆಯ ಪ್ರಕಾರ ಅವರ ಅಂಗಿಯಲ್ಲಿ ಚಕ್ರ ತಾಗಿದ ಗುರುತು ಇತ್ತೆನ್ನಲಾಗಿದೆ. ಮನೆಯವರು ನೀಡಿದ ದೂರಿನನ್ವಯ ಸುಳ್ಯ ಪೋಲಿಸರ ನೇತೃತ್ವದಲ್ಲಿ ರಾಜ್ಯ ಸರಕಾರದ
ನ್ಯಾಯ ವಿಜ್ಞಾನ ಪ್ರಯೋಗಾಲಯ ಮಂಗಳೂರು ಇದರ ಸಿಬ್ಬಂದಿಗಳು ಆಗಮಿಸಿ ‌ಲಾರಿಯ ಚಕ್ರದ ಅಚ್ಚು ತೆಗೆದು ಪರೀಕ್ಷಿಸಲು ಕೊಂಡು ಹೋಗಿದ್ದಾರೆ. ಸಂಜೆ ಸುಮಾರು 3 ತಾಸುಗಳ ಕಾಲ ಸುಳ್ಯದ ಎಸ್.ಐ ಮತ್ತು ಕ್ರೈಂ ಪೋಲಿಸರು ಸ್ಥಳದಲ್ಲಿದ್ದು ಲಾರಿಯ ಮಹಜರು ನಡೆಸಿದರು. ಸ್ಪಷ್ಟವಾದ ಮಾಹಿತಿ ಲ್ಯಾಬ್ ರಿಪೋರ್ಟ್ ಬಂದ ನಂತರ ತಿಳಿದು ಬರಬೇಕಾಗಿದೆ.